ಪೂನಂ ಯಾದವ್ ಬಗ್ಗೆ ಮತ್ತೆ ಸುಳ್ಳು ಸುದ್ದಿ

Krishnaveni K

ಗುರುವಾರ, 8 ಫೆಬ್ರವರಿ 2024 (17:01 IST)
ಮುಂಬೈ: ಇತ್ತೀಚೆಗೆ ತಮ್ಮದೇ ಸಾವಿನ ಬಗ್ಗೆ ತಾವೇ ಸುಳ್ಳು ಸುದ್ದಿ ಹರಡಿ ಟೀಕೆಗೆ ಗುರಿಯಾಗಿದ್ದ ಬಾಲಿವುಡ್ ನಟಿ ಪೂನಂ ಯಾದವ್ ಬಗ್ಗೆ ಈಗ ಮತ್ತೊಂದು ಸುಳ್ಳು ಸುದ್ದಿ ಹಬ್ಬಿತ್ತು.

ಪೂನಂ ಯಾದವ್ ಕೇಂದ್ರ ಆರೋಗ್ಯ ಸಚಿವಾಲಯದ ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ರಾಯಭಾರಿಯಾಗಿದ್ದಾರೆ ಎಂದು ಸುದ್ದಿ ಹರಡಿತ್ತು. ಇದೀಗ ಆ ಸುದ್ದಿಗೆ ಸ್ವತಃ ಸರ್ಕಾರದ ಕಡೆಯಿಂದಲೇ ಸ್ಪಷ್ಟನೆ ಸಿಕ್ಕಿದೆ. ಈ ರೀತಿಯ ಯಾವುದೇ ಆಲೋಚನೆಯಿಲ್ಲ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ. ಆ ಮೂಲಕ ಪೂನಂ ಬಗ್ಗೆ ಹರಡಿದ್ದ ಮತ್ತೊಂದು ವದಂತಿಗೆ ಬ್ರೇಕ್ ಬಿದ್ದಿದೆ.

ಸಾವನ್ನಪ್ಪಿರುವುದಾಗಿ ವದಂತಿ ಹರಡಿದ್ದ ನಟಿ
ಮೊನ್ನೆಯಷ್ಟೇ ನಟಿ ಪೂನಂ ಯಾದವ್ ಗರ್ಭಕಂಠದ ಕ್ಯಾನ್ಸರ್ ನಿಂದ ಸಾವನ್ನಪ್ಪಿರುವುದಾಗಿ ಅವರ ಮ್ಯಾನೇಜರ್ ಅವರೇ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ ಸಂಚಲನ ಮೂಡಿಸಿದ್ದರು. ಈ ಸಂದೇಶವನ್ನು ನಂಬಲು ಸಾಧ್ಯವಾಗದಿದ್ದರೂ ಅವರ ತಂಡದ ಕಡೆಯಿಂದಲೇ ಬಂದ ಸುದ್ದಿಯಾಗಿದ್ದರಿಂದ ಎಷ್ಟೋ ಮಂದಿ ಸಂತಾಪ ವ್ಯಕ್ತಪಡಿಸಿದ್ದರು.

ಆದರೆ ಮರುದಿನ ಮತ್ತೊಂದು ವಿಡಿಯೋ ಮಾಡಿದ್ದ ಪೂನಂ ತಾನು ಸತ್ತಿಲ್ಲ. ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಈ ನಾಟಕ ಮಾಡಿದ್ದಾಗಿ ಹೇಳಿದ್ದರು. ಇದರ ಬಗ್ಗೆ ನೆಟ್ಟಿಗರು ಅವರಿಗೆ ಉಗಿದು ಉಪ್ಪಿನಕಾಯಿ ಹಾಕಿದ್ದರು. ಪ್ರಚಾರಕ್ಕಾಗಿ ತಮ್ಮ ಸಾವಿನ ವದಂತಿ ಹರಡುವಷ್ಟು ಕೀಳು ಮಟ್ಟಿಕ್ಕಿಳದಿದ್ದಾರೆ ಎಂದು ಟೀಕಿಸಿದ್ದರು.

ಇದರ ಬೆನ್ನಲ್ಲೇ ಇದೀಗ ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಪೂನಂರನ್ನು ರಾಯಭಾರಿಯಾಗಿ ಕೇಂದ್ರ ಆರೋಗ್ಯ ಇಲಾಖೆ ನೇಮಕ ಮಾಡಿದೆ ಎಂಬ ಸುದ್ದಿ  ಹರಡಿತ್ತು. ಅದೀಗ ಸುಳ್ಳೆಂದು ಸಾಬೀತಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ