ಗಲ್ವಾನ್ ಕಣಿವೆ ಸಂಘರ್ಷದ ಬಗ್ಗೆ ಸಿನಿಮಾ ಮಾಡಲಿರುವ ನಟ ಅಜಯ್ ದೇವಗನ್

ಶನಿವಾರ, 4 ಜುಲೈ 2020 (10:44 IST)
ಮುಂಬೈ: ಭಾರತೀಯ ಸೈನಿಕರ ವೀರಾವೇಷದ ಬಗ್ಗೆ ಅನೇಕ ಸಿನಿಮಾಗಳು ಬಂದಿವೆ. ಇದೀಗ ಮೊನ್ನೆಯಷ್ಟೇ ಭಾರತ ಮತ್ತು ಚೀನಾ ಸೈನಿಕರ ನಡುವೆ ಗಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದ ಬಗ್ಗೆ ಸಿನಿಮಾವೊಂದು ಮೂಡಿಬರಲಿದೆ.


ಬಾಲಿವುಡ್ ನಟ ಅಜಯ್ ದೇವಗನ್ ಗಲ್ವಾನ್ ಕಣಿವೆಯ ಸಂಘರ್ಷದ ಬಗ್ಗೆ ಸಿನಿಮಾ ಮಾಡಲಿದ್ದಾರೆ.  20 ಭಾರತೀಯ ಯೋಧರ ಪ್ರಾಣತ್ಯಾಗದ ಬಗ್ಗೆ, ಚೀನಾ ಸೈನಿಕರೊಡನೆ ಅವರ ಗುದ್ದಾಟದ ಬಗ್ಗೆ ಸಿನಿಮಾದಲ್ಲಿ ವಿವರಿಸಲಾಗುತ್ತದೆ.

ಆದರೆ ಈ ಸಿನಿಮಾದಲ್ಲಿ ಯಾರೆಲ್ಲಾ ಅಭಿನಯಿಸಲಿದ್ದಾರೆ, ನಿರ್ದೇಶನ ಮಾಡುವವರು ಯಾರು ಎಂಬ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ