ಆಲಿಭಾಗ್ ನಲ್ಲಿ ಮತ್ತೊಂದು ಜಮೀನು ಖರೀದಿಸಿದ ವಿರಾಟ್ ಕೊಹ್ಲಿ ದಂಪತಿ

ಮಂಗಳವಾರ, 15 ಆಗಸ್ಟ್ 2023 (09:10 IST)
Photo Courtesy: Twitter
ಮುಂಬೈ: ವಿಶ್ವದ ಶ್ರೀಮಂತ ಕ್ರಿಕೆಟಿಗರಲ್ಲೊಬ್ಬರಾದ ವಿರಾಟ್ ಕೊಹ್ಲಿ ಮುಂಬೈ ಸಮೀಪ ಆಲಿಭಾಗ್ ನಲ್ಲಿ ದುಬಾರಿ ಬೆಲೆಯ ಎರಡು ಜಮೀನು ಖರೀದಿಸಿ ಸುದ್ದಿಯಾಗಿದ್ದಾರೆ.

ಕೊಹ್ಲಿ ದಂಪತಿ ಆಲಿಭಾಗ್ ನಲ್ಲಿ ಈಗಾಗಲೇ ಒಂದು ಜಮೀನು ಖರೀದಿಸಿದ್ದರು. ಇದೀಗ ಕೊಹ್ಲಿ-ಅನುಷ್ಕಾ ಮತ್ತೆರಡು ಜಮೀನು ಖರೀದಿಸಿದ್ದಾರೆ.

4.91 ಎಕರೆ ಮತ್ತು 2.54 ಎಕರೆಯ ಎರಡು ಜಮೀನುಗಳನ್ನು ಸುಮಾರು 20 ಕೋಟಿ ರೂ.ಗೆ ಕೊಹ್ಲಿ ದಂಪತಿ ಖರೀದಿ ಮಾಡಿದ್ದಾರೆ. ನಿನ್ನೆ ಖುದ್ದಾಗಿ ಕೊಹ್ಲಿ ದಂಪತಿ ಈ ಸ್ಥಳಗಳಿಗೆ ತೆರಳಿ ಸ್ಥಳ ವೀಕ್ಷಣೆ ಕೂಡಾ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ