ಸಮುದಾಯಕ್ಕೆ ಅವಮಾನ ಕೇಸ್: ಉಪೇಂದ್ರಗೆ ಇನ್ನಷ್ಟು ಸಂಕಷ್ಟ
ಪ್ರಕರಣಕ್ಕೆ ಸಂಬಂಧಪಟ್ಟಂತೆ ಉಪೇಂದ್ರ ವಿರುದ್ಧ ಮತ್ತಷ್ಟು ದೂರು ದಾಖಲಾಗಿದ್ದವು. ಇದೀಗ ಉಪೇಂದ್ರ ತಕ್ಷಣವೇ ವಿಚಾರಣೆಗೆ ಹಾಜರಾಗಲು ಕತ್ರಿಗುಪ್ಪೆ ಮತ್ತು ಸದಾಶಿವನಗರ ಪೊಲೀಸರು ನೋಟಿಸ್ ನೀಡಿದ್ದಾರೆ.
ಪ್ರಕರಣ ವಿವಾದಕ್ಕೀಡಾಗುತ್ತಿದ್ದಂತೇ ನಟ ಉಪೇಂದ್ರ ಸ್ಪಷ್ಟನೆ ನೀಡಿದ್ದಲ್ಲದೆ, ವಿಡಿಯೋ ಕೂಡಾ ಡಿಲೀಟ್ ಮಾಡಿದ್ದರು. ಆದರೆ ಕ್ಷಮೆ ಕೇಳಿದರೂ ಉಪೇಂದ್ರಗೆ ಸಂಕಷ್ಟ ತಪ್ಪಿಲ್ಲ.