ಪುರುಷರ ಕೋಪಕ್ಕೆ ಗುರಿಯಾದ ಅಲಿಯಾ ಭಟ್! ಕಾರಣವೇನು ಗೊತ್ತಾ?
ನಾಳೆ ಅಲಿಯಾ ಭಟ್ ಪ್ರಮುಖ ಪಾತ್ರದಲ್ಲಿರುವ ಡಾರ್ಲಿಂಗ್ಸ್ ಎನ್ನುವ ಸಿನಿಮಾ ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗುತ್ತಿದೆ. ಈ ಸಿನಿಮಾದಲ್ಲಿ ಮಹಿಳೆಯರು ಪತಿಯಂದಿರ ಮೇಲೆ ಶೋಷಣೆ ಮಾಡುವ ದೃಶ್ಯಗಳಿವೆ. ಆದರೆ ಇದನ್ನು ತಮಾಷೆಯಾಗಿ ತೋರಿಸಲಾಗಿದೆ.
ಪುರುಷರ ಮೇಲಿನ ಗೃಹಹಿಂಸೆ ಎನ್ನುವುದನ್ನು ತಮಾಷೆಯಾಗಿ ತೋರಿಸಿರುವುದಕ್ಕೆ ಆ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ಅಲಿಯಾ ಮೇಲೆ ಪುರುಷರು ಕೋಪಗೊಳ್ಳುವಂತೆ ಮಾಡಿದೆ. ಈ ಕಾರಣಕ್ಕೆ ಟ್ವಿಟರ್ ನಲ್ಲಿ ನೆಟ್ಟಿಗರು ಬಾಯ್ಕಾಟ್ ಅಲಿಯಾ ಭಟ್ ಟ್ರೆಂಡ್ ಆರಂಭಿಸಿದ್ದಾರೆ!