ಕನ್ನಡ್ ಎಂದ ನಿರೂಪಕಿಗೆ ತಕ್ಕ ಉತ್ತರ ಕೊಟ್ಟ ಕಿಚ್ಚ ಸುದೀಪ್: ವಿಡಿಯೋ ವೈರಲ್

ಬುಧವಾರ, 3 ಆಗಸ್ಟ್ 2022 (09:10 IST)
ಬೆಂಗಳೂರು: ಪರಭಾಷೆಯವರು ಕನ್ನಡ ಎಂಬ ಪದವನ್ನು ಕನ್ನಡ್ ಎನ್ನುವುದು ಸಾಮಾನ್ಯ. ಆದರೆ ಕಿಚ್ಚ ಸುದೀಪ್ ಗೆ ಮಾತ್ರ ಇದೊಂದು ವಿಚಾರ ಬಿಲ್ ಕುಲ್ ಇಷ್ಟವಾಗಲ್ಲ.

ವಿಕ್ರಾಂತ್ ರೋಣ ಪ್ರಮೋಷನ್ ವೇಳೆ ಹಿಂದಿ ಮಾಧ್ಯಮದವರೊಬ್ಬರು ಕನ್ನಡ್ ಎಂದಿದ್ದಕ್ಕೆ ಸುದೀಪ್ ಪತ್ರಿಕಾಗೋಷ್ಠಿಯಲ್ಲೇ ಅದು ಕನ್ನಡ್ ಅಲ್ಲ, ಕನ್ನಡ ಎಂದು ತಿದ್ದಿದ್ದರು.

ಇದೀಗ ಮತ್ತೆ ಸುದೀಪ್ ಸಂದರ್ಶನವೊಂದರಲ್ಲಿ ಹಿಂದಿ ನಿರೂಪಕಿಯೊಬ್ಬರು ಕನ್ನಡ್ ಎಂದು ಹೇಳಿದಾಗ ಕಿಚ್ಚ ಖಡಕ್ ಉತ್ತರ ಕೊಟ್ಟಿದ್ದಾರೆ. ಅದು ಕನ್ನಡ್ ಅಲ್ಲ, ಕನ್ನಡ. ಹಿಂದಿ ಎಂಬುದು ಹಿಂದ್ ಎಂದು ಆಗಲ್ಲ, ಅದೇ ರೀತಿ ಕನ್ನಡ ಕನ್ನಡ್ ಆಗಲ್ಲ ಎಂದು ಸುದೀಪ್ ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ