ಕರೀನಾ ಮಾಡಿದ ತಪ್ಪನ್ನೇ ಮಾಡಿದ ಅಲಿಯಾ ಭಟ್

ಗುರುವಾರ, 25 ಆಗಸ್ಟ್ 2022 (08:10 IST)
ಮುಂಬೈ: ಇತ್ತೀಚೆಗೆ ಲಾಲ್ ಸಿಂಗ್ ಛಡ್ಡಾ ಸಿನಿಮಾ ಬಿಡುಗಡೆಗೆ ಮೊದಲು ನಟಿ ಕರೀನಾ ಕಪೂರ್ ಸಿನಿಮಾ ಬಹಿಷ್ಕರಿಸುವವರಿಗೆ ಡೋಂಟ್ ಕೇರ್ ಎಂದು ಕೈ ಸುಟ್ಟುಕೊಂಡಿದ್ದರು.

ಲಾಲ್ ಸಿಂಗ್ ಬಹಿಷ್ಕಾರದ ಅಭಿಯಾನಕ್ಕೆ ನಲುಗಿ ಹೀನಾಯ ಸೋಲು ಕಂಡಿತ್ತು. ಇದೀಗ ಬ್ರಹ್ಮಾಸ್ತ್ರ ನಟಿ ಅಲಿಯಾ ಭಟ್ ಕೂಡಾ ಅದೇ ತಪ್ಪು ಮಾಡಿದ್ದಾರೆ.

ಅಲಿಯಾ ನನ್ನ ಸಿನಿಮಾ ನೋಡಲು ಇಷ್ಟವಿಲ್ಲದವರು ನೋಡಬೇಡಿ ಎಂದು ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಈಗ ನೆಟ್ಟಿಗರು ಹಾಗಿದ್ದರೆ ಅಲಿಯಾ ಸಿನಿಮಾವನ್ನೂ ಬಹಿಷ್ಕರಿಸೋಣ ಎನ್ನುತ್ತಿದ್ದಾರೆ. ಹೀಗೇ ಆದರೆ ಕರೀನಾಗೆ ಆದ ಸ್ಥಿತಿಯೇ ಅಲಿಯಾಗೂ ಆಗುವುದ ಖಚಿತ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ