ವಿಕ್ರಮ್ ವೇದಾ ಟೀಸರ್ ಔಟ್: ಬಾಲಿವುಡ್ಡಿಗರಿಗೆ ಈಗ ಹೃತಿಕ್, ಸೈಫ್ ಮೇಲೆ ನಿರೀಕ್ಷೆ

ಬುಧವಾರ, 24 ಆಗಸ್ಟ್ 2022 (16:40 IST)
ಮುಂಬೈ: ಸತತ ಸೋಲಿನಿಂದ ಕಂಗೆಟ್ಟಿರುವ ಬಾಲಿವುಡ್ ಮಂದಿ ಈಗ ಒಂದೇ ಒಂದು ಬ್ರೇಕ್ ಗಾಗಿ ಕಾಯುತ್ತಿದ್ದಾರೆ. ಈ ನಡುವೆ ಹೃತಿಕ್ ರೋಷನ್, ಸೈಫ್ ಅಲಿಖಾನ್ ಪ್ರಮುಖ ಪಾತ್ರದಲ್ಲಿರುವ ವಿಕ್ರಮ್ ವೇದಾ ಟೀಸರ್ ಬಿಡುಗಡೆಯಾಗಿದೆ.

ಈ ಟೀಸರ್ ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಾಲಿವುಡ್ ಮಂದಿಗೆ ಕೊಂಚ ಚೇತರಿಕೆ ತಂದಿದೆ. ಈ ಸಿನಿಮಾವಾದರೂ ಗೆಲುವು ಕಂಡು ಬಾಲಿವುಡ್ ಮತ್ತೆ ಟ್ರ್ಯಾಕ್ ಗೆ ಮರಳಬಹುದು ಎಂಬ ವಿಶ್ವಾಸದಲ್ಲಿದ್ದಾರೆ.

ಈಗಾಗಲೇ ಟೀಸರ್ ಗೆ 13 ಲಕ್ಷಕ್ಕಿಂತಲೂ ಹೆಚ್ಚು ವ್ಯೂ ಬಂದಿದೆ. ಸೆಪ್ಟೆಂಬರ್ 30 ರಂದು ಚಿತ್ರ ಥಿಯೇಟರ್ ನಲ್ಲಿ ಬಿಡುಗಡೆಯಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ