ಮ್ಯಾನ್‍ಹೋಲ್ ಕ್ಲೀನ್ ಮಾಡುವ ಪೌರ ಕಾರ್ಮಿಕರ ನೆರವಿಗೆ ನಿಂತ ಅಮಿತಾಭ್ ಬಚ್ಚನ್

ಶನಿವಾರ, 24 ನವೆಂಬರ್ 2018 (07:05 IST)
ಮುಂಬೈ : ರೈತರಿಗೆ ಸಹಾಯ ಹಸ್ತ ನೀಡಿದ್ದ ಬಾಲಿವುಡ್ ನ ಹಿರಿಯ ನಟ ಅಮಿತಾಭ್ ಬಚ್ಚನ್ ಇದೀಗ ಪೌರ ಕಾರ್ಮಿಕರ ನೆರವಿಗೆ ನಿಂತಿದ್ದಾರೆ.

ಹೌದು. ಕ್ಲೀನ್ ಮ್ಯಾರಥಾನ್ ನಲ್ಲಿ ಭಾಗವಹಿಸಿದ್ದ ನಟ ಅಮಿತಾಭ್ ಬಚ್ಚನ್ ಅವರಿಗೆ  ಮ್ಯಾನ್‍ಹೋಲ್ ಕ್ಲೀನ್ ಮಾಡುವ ವೇಳೆ ಹಲವು ಮಂದಿ ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಇದರಿಂದ ಬೇಸರಗೊಂಡ ನಟ ಮ್ಯಾನ್ ಹೋಲ್‍ಗಳಿಗೆ ಇಳಿಯದೇ ಸ್ಪಚ್ಛ ಮಾಡಲು ಪೌರ ಕಾರ್ಮಿಕರಿಗೆ 50 ಸ್ಪಚ್ಛತಾ ಯಂತ್ರಗಳನ್ನು ಖರೀದಿಸಲು ನಿರ್ಧಾರ ಮಾಡಿದ್ದಾರೆ.

 

ಈ ಕುರಿತು ತಮ್ಮ ಬ್ಲಾಗ್‍ನಲ್ಲಿ ಮಾಹಿತಿ ಹಂಚಿಕೊಂಡಿರುವ ಅಮಿತಾಭ್, ಮ್ಯಾನ್‍ಹೋಲ್ ಕ್ಲೀನ್ ಮಾಡುವ ವೇಳೆ ಹಲವು ಮಂದಿ ಸಾವನ್ನಪ್ಪಿದ್ದಾರೆ. ಅವರ ಸಾವಿನ ಪ್ರಕರಣಗಳು ನಿಧಾನವಾಗಿ ಬೆಳಕಿಗೆ ಬರುತ್ತದೆ. ಈ ಕಾರ್ಯಕ್ಕೆ ಅವರು ಸಾಮಾನ್ಯ ವಸ್ತುಗಳನ್ನು ಬಳಸುತ್ತಾರೆ. ಅದ್ದರಿಂದ ಅವರಿಗೆ ಹೆಚ್ಚಿನ ರಕ್ಷಣೆ ಹಾಗೂ ಆಧುನಿಕ ಯಂತ್ರಗಳ ಅಗತ್ಯವಿದೆ ಎಂದು ಬರೆದುಕೊಂಡಿದ್ದಾರೆ.

 

ಹಾಗೇ ಕಾರ್ಯನಿರ್ವಹಿಸಲು ಸುಲಭವಿರುವ ಹಾಗೂ ಸೂಕ್ತ ಗಾತ್ರದ ಯಂತ್ರಗಳನ್ನು ಖರೀದಿ ಮಾಡಲಾಗುವುದು. ಈ ಕುರಿತು ಸ್ಥಳೀಯ ಮಹಾನಗರ ಪಾಲಿಕೆಗೆ ಎರಡು ದಿನಗಳಲ್ಲಿ ಮಾಹಿತಿ ನೀಡುತ್ತೇನೆ ಎಂದು ತಿಳಿಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ