ಶಾರುಖ್ ಖಾನ್ ಮುಖಕ್ಕೆ ಮಸಿ ಎರಚುತ್ತೇವೆ ಎಂದು ಕಳಿಂಗ ಸೇನೆ ಹೇಳಿದ್ಯಾಕೆ?
ಶನಿವಾರ, 24 ನವೆಂಬರ್ 2018 (06:58 IST)
ಮುಂಬೈ : ಒಡಿಶಾ ರಾಜಧಾನಿ ಭುವನೇಶ್ವರದಲ್ಲಿ ನಡೆಯಲಿರುವ ಭಾರತ ಮಹಿಳಾ ಹಾಕಿ ತಂಡ, 2018ರ ವಿಶ್ವಕಪ್'ಗೆ ಅರ್ಹತೆ ಪಡೆದುಕೊಂಡಿದೆ. ಆದರೆ ಈ ಹಾಕಿ ವಿಶ್ವಕಪ್ ಕಾರ್ಯಕ್ರಮಕ್ಕೆ ಬಾಲಿವುಡ್ ನಟ ಶಾರುಖ್ ಖಾನ್ ಪಾಲ್ಗೊಳ್ಳದಂತೆ ಸ್ಥಳೀಯ ಸಂಘಟನೆಯೊಂದು ಬೆದರಿಕೆ ಹಾಕಿದೆ.
ಕಾರಣ ನಟ ಶಾರುಖ್ ಖಾನ್ 2001ರಲ್ಲಿ ತೆರೆಕಂಡ 'ಅಶೋಕ' ಚಿತ್ರದಲ್ಲಿ ಕಳಿಂಗ ಯುದ್ಧವನ್ನು ತಪ್ಪಾಗಿ ಚಿತ್ರಿಸಿದ್ದ ಕಾರಣ ಇದು ಒಡಿಶಾ ಜನರ ಭಾವನೆಗಳಿಗೆ ಇದರಿಂದ ನೋವಾಗಿದೆ. ಆದಕಾರಣ ಈ ವಿಷಯದ ಕುರಿತಾಗಿ ನ.1ರಂದು ಪೊಲೀಸರಿಗೆ ದೂರು ನೀಡಿದ್ದು ಶಾರುಖ್ ಖಾನ್ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಎಂದು ಕಳಿಂಗ ಸೇನಾ ಎಂಬ ಸ್ಥಳೀಯ ಸಂಘಟನೆ ಹೇಳಿದೆ.
ಒಂದು ವೇಳೆ ಶಾರುಖ್ ಖಾನ್ ಕ್ಷಮೆ ಕೇಳದೆ ಹಾಕಿ ವಿಶ್ವಕಪ್ ಕಾರ್ಯಕ್ರಮಕ್ಕೆ ಆಗಮಿಸಿದರೆ ಅವರ ಮುಖಕ್ಕೆ ಮಸಿ ಎರಚುತ್ತೇವೆ, ವಿಮಾನ ನಿಲ್ದಾಣದಲ್ಲಿ ಅವರಿಗೆ ಕಪ್ಪು ಬಾವುಟ ತೋರಿಸಲಾಗುವುದು ಎಂದು ಸಂಘಟನೆಯ ಮುಖ್ಯಸ್ಥ ಹೇಮಂತ್ ರಾತ್ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.