ಪವರ್ ಗ್ರೀಡ್: ಸೂಕ್ತ ಪರಿಹಾರಕ್ಕೆ ರೈತರ ಆಗ್ರಹ

ಶುಕ್ರವಾರ, 23 ನವೆಂಬರ್ 2018 (15:56 IST)
ಪವರ್ ಗ್ರೀಡ್ ನಿರಾಶ್ರಿತ ರೈತರಿಗೆ ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ಧರಣಿ ಆರಂಭಗೊಂಡಿದೆ.

ಸೂಕ್ತಪರಿಹಾರ ಸಿಗದ ಹಿನ್ನಲೆ ತೋಟದ ಮಾಲಿಕರಿಂದ ಪವರ್ ಗ್ರೀಡ್ ಕಾಮಗಾರಿಗೆ ಅಡ್ಡಿಪಡಿಸಲಾಗುತ್ತಿದೆ. ಚಿಕ್ಕಬಳ್ಳಾಪುರದ ಗೌರಿಬಿದನೂರಿನ ಮೇಳ್ಯದಲ್ಲಿ ಆಂಜಿನಪ್ಪ ಹೊಲದಲ್ಲಿ ಕಾಮಗಾರಿಗೆ ಅಡ್ಡಿಪಡಿಸಲಾಗಿದೆ.

ವಿಡಿಯೋ ಮಾಡುತ್ತಿದ್ದ ರೈತರ ಮೊಬೈಲ್ ಕಸಿದು ದೌರ್ಜನ್ಯ ನಡೆಸಿದ ಪೊಲೀಸರ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಲಾಗಿದೆ.
ಕಾಮಗಾರಿ ತಡೆದಿದ್ದಕ್ಕೆ ರೈತರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸರ ವಿರುದ್ಧ ರೈತರು ಆರೋಪ ಮಾಡಿದ್ದಾರೆ. ಪವರ್ ಗ್ರೀಡ್ ವಿದ್ಯುತ್ ಲೈನ್ ಗೆ ಭೂಮಿ ಕಳೆದುಕೊಳ್ತಿರುವ ರೈತರು, ಕೆ.ಪಿ.ಟಿ.ಸಿ.ಎಲ್ ಮಾದರಿಯಲ್ಲಿ ರೈತರ ಜಮೀನಿಗೆ ಪರಿಹಾರಕ್ಕೆ ಒತ್ತಾಯಿಸಿ 8 ದಿನದಿಂದ ಧರಣಿ ಆರಂಭಿಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ