ಅಕ್ಷಯ್ ಕುಮಾರ್ ಅಭಿನಯದ ಪೃಥ್ವಿರಾಜ್ ವೀಕ್ಷಿಸಲಿರುವ ಗೃಹ ಸಚಿವ ಅಮಿತ್ ಶಾ
ಜೂನ್ 3 ರಂದು ಪೃಥ್ವಿರಾಜ್ ಸಿನಿಮಾ ಬಹುಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಸಿನಿಮಾವನ್ನು ಕೇಂದ್ರ ಗೃಹಸಚಿವ ಅಮಿತ್ ಶಾ ವೀಕ್ಷಿಸಲಿದ್ದಾರೆ ಎಂಬ ಸುದ್ದಿಯಿದೆ. ಅಮಿತ್ ಶಾಗೆ ಈಗಾಗಲೇ ಆಹ್ವಾನ ನೀಡಲಾಗಿದೆ.
ಪೃಥ್ವಿರಾಜ್ ಚೌಹಾಣ್ ಇತಿಹಾಸದ ಕತೆ ಇರುವ ಕಾರಣ ರಾಜಕೀಯ ಗಣ್ಯರು, ಅಧಿಕಾರಿಗಳೂ ಈ ಸಿನಿಮಾವನ್ನು ವೀಕ್ಷಿಸಲಿದ್ದಾರೆ ಎನ್ನಲಾಗಿದೆ. ಇದು ಬಾಲಿವುಡ್ ಗೆ ಚೇತರಿಕೆ ನೀಡಬಹುದು ಎಂಬ ವಿಶ್ವಾಸ ಚಿತ್ರತಂಡದ್ದು.