ಮುಂಬೈ ಆಸ್ಪತ್ರೆಯಿಂದ ಅಮಿತಾಭ್ ಸಂದೇಶ: ಸೆಲೆಬ್ರಿಟಿಗಳು ಅಭಿಮಾನಿಗಳಿಂದ ಹಾರೈಕೆ

ಭಾನುವಾರ, 12 ಜುಲೈ 2020 (09:43 IST)
ಮುಂಬೈ: ಕೊರೋನಾದಿಂದ ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಾಗಿರುವ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ತಮ್ಮ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದು, ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.


ಅಮಿತಾಭ್ ಆರೋಗ್ಯ ಗಂಭೀರವಾಗಿಲ್ಲ. ಅವರಿಗೆ ಸಣ್ಣ ಮಟ್ಟಿಗಿನ ಲಕ್ಷಣಗಳು ಕಾಣಿಸಿಕೊಂಡಿದೆಯಷ್ಟೇ ಎಂದು ಆಸ್ಪತ್ರೆ ಮೂಲಗಳೇ ಹೇಳಿವೆ.

ಈ ನಡುವೆ ಅಮಿತಾಭ್ ಶೀಘ‍್ರ ಗುಣಮುಖರಾಗುವಂತೆ ಕ್ರಿಕೆಟಿಗರು, ಸಿನಿಮಾ ಕಲಾವಿದರು, ರಾಜಕಾರಣಿಗಳು ಸಾಮಾಜಿಕ ಜಾಲತಾಣದ ಮೂಲಕ ಹಾರೈಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ