ಮನೆಯಲ್ಲಿ ಬಾವಲಿ ಕಾಟ: ಪರಿಹಾರ ಕೊಡಿ ಎಂದ ಬಿಗ್ ಬಿ ಅಮಿತಾಭ್ ಬಚ್ಚನ್
ಮುಂಬೈನ ಐಷಾರಾಮಿ ಜಲ್ಸಾ ಬಂಗಲೆಯಲ್ಲಿ ಬಾವಲಿ ಕಾಟ ಮತ್ತೆ ಶುರುವಾಗಿದೆ. ಇದಕ್ಕೆ ಎಲ್ಲಾ ರೀತಿಯ ಕ್ರಮ ಕೈಗೊಂಡರೂ ಮತ್ತೆ ಮತ್ತೆ ಕಂಡುಬರುತ್ತಿದೆ. ಇದರಿಂದ ಪಾರಾಗುವುದು ಹೇಗೆ ಎಂದು ತಿಳಿಯುತ್ತಿಲ್ಲ. ಬಾವಲಿಗಳ ಕಾಟ ನಿವಾರಿಸುವುದು ಹೇಗೆ ಎಂದು ಗೊತ್ತಿದ್ದರೆ ಹೇಳಿ ಎಂದು ಅಮಿತಾಭ್ ತಮ್ಮ ಬ್ಲಾಗ್ ನಲ್ಲಿ ಕೇಳಿಕೊಂಡಿದ್ದಾರೆ.
ಈಗಾಗಲೇ ಧೂಪ ಹಾಕಿ, ಸ್ಯಾನಿಟೈಸ್ ಮಾಡಿ ಎಲ್ಲಾ ನೋಡಿದ್ದೇವೆ. ಏನೇ ಮಾಡಿದರೂ ಬಾವಲಿ ಬಿಟ್ಟು ಹೋಗುತ್ತಿಲ್ಲ ಎಂದು ಅಮಿತಾಭ್ ಅಳಲು ತೋಡಿಕೊಂಡಿದ್ದಾರೆ.