ಇನ್ನೂ ಒಂದು ವಾರ ಅಮಿತಾಭ್ ಬಚ್ಚನ್ ಆಸ್ಪತ್ರೆ ವಾಸ: ಐದು ದಿನಗಳ ಬಳಿಕ ಕೊರೋನಾ ಪರೀಕ್ಷೆ

ಬುಧವಾರ, 15 ಜುಲೈ 2020 (08:57 IST)
ಮುಂಬೈ: ಕೊರೋನಾ ಸೋಂಕಿತರಾದ ಹಿನ್ನಲೆಯಲ್ಲಿ ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಹಾಗೂ ಪುತ್ರ ಅಭಿಷೇಕ್ ಬಚ್ಚನ್ ಇನ್ನೂ ಒಂದು ವಾರ ಕಾಲ ಆಸ್ಪತ್ರೆಯಲ್ಲೇ ಚಿಕಿತ್ಸೆಗೊಳಗಾಗಲಿದ್ದಾರೆ.

 

ಆಸ್ಪತ್ರೆಯಿಂದ ಬಿಡುಗಡೆಯಾಗುವ ಮೊದಲು ಮತ್ತೊಮ್ಮೆ ಕೊರೋನಾ ಪರೀಕ್ಷೆಗೊಳಪಡಲಿದ್ದಾರೆ. ಆಗ ನೆಗೆಟಿವ್ ಫಲಿತಾಂಶ ಬಂದರಷ್ಟೇ ಅವರನ್ನು ಮನೆಗೆ ಕಳುಹಿಸುವ ಸಾಧ‍್ಯತೆಯಿದೆ. ಈಗಾಗಲೇ ಐಶ್ವರ್ಯಾ ರೈ ಹಾಗೂ ಆರಾಧ‍್ಯ ಬಚ್ಚನ್ ಮನೆಯಲ್ಲಿಯೇ ಕೊರೋನಾಗೆ ಚಿಕಿತ್ಸೆಗೊಳಪಡುತ್ತಿದ್ದಾರೆ. ಅವರ ಆರೋಗ್ಯದಲ್ಲೂ ಚೇತರಿಕೆ ಕಂಡುಬಂದಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ