ಬೆಂಗಳೂರು ಲಾಕ್ ಡೌನ್ ಪಾರ್ಟ್ 2: ತಲೆಮೇಲೆ ಕೈಹೊತ್ತು ಕೂತಿರುವ ಕೈಗಾರಿಕೆಗಳು

ಮಂಗಳವಾರ, 14 ಜುಲೈ 2020 (09:33 IST)
ಬೆಂಗಳೂರು: ಲಾಕ್ ಡೌನ್ ಎರಡನೇ ಭಾಗ ನಾಳೆಯಿಂದ ಬೆಂಗಳೂರಿನಲ್ಲಿ ಆರಂಭವಾಗಲಿದೆ. ಕೊರೋನಾ ನಿಯಂತ್ರಿಸಲು ಸರ್ಕಾರವೇನೋ ಈ ಒಂದು ವಾರ ಕಾಲ ಬೆಂಗಳೂರು ಲಾಕ್ ಡೌನ್ ಗೆ ತೀರ್ಮಾನಿಸಿದೆ. ಆದರೆ ಕೈಗಾರಿಕೆಗಳು ತಲೆಮೇಲೆ ಕೈ ಹೊತ್ತು ಕೂತಿವೆ.


ಲಾಕ್ ಡೌನ್ ನಿಂದ ಚೇತರಿಸಿಕೊಂಡು ಈಗಷ್ಟೇ ಕೆಲಸ ಆರಂಭಿಸಿದ್ದ ಕೈಗಾರಿಕೆಗಳು ಹೊಸದಾಗಿ ಆರ್ಡರ್ ಪಡೆಯುವುದು, ಕಳುಹಿಸುವುದು ಎಂಬಿತ್ಯಾದಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿವೆ. ಆದರೆ ಈಗ ಏಕಾಏಕಿ ಮತ್ತೆ ಲಾಕ್ ಡೌನ್ ಆದರೆ ಕೈಗಾರಿಕಾ ಚಟುವಟಿಕೆ ಮೇಲೆ ಪರಿಣಾಮ ಬೀರಲಿದೆ.

ಇದು ರಾಜ್ಯದ ಆದಾಯಕ್ಕೂ ಪೆಟ್ಟು ನೀಡಲಿದೆ. ಕೇವಲ ಉದ್ಯಮಗಳಿಗೆ ಮಾತ್ರವಲ್ಲ, ಅವರನ್ನು ನಂಬಿಕೊಂಡು ನೂರಾರು ಕಾರ್ಮಿಕರ ಬದುಕು ಇದೆ. ಅವೆಲ್ಲವೂ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ