ಸಂಗೀತ ನಿರ್ದೇಶಕನಾಗುತ್ತಿದ್ದಾರೆ ಬಿಗ್ ಬಿ ಅಮಿತಾಭ್ ಬಚ್ಚನ್
ಇದೀಗ ಅಮಿತಾಭ್ ಸಂಗೀತ ನಿರ್ದೇಶಕನಾಗುತ್ತಿದ್ದಾರೆ. ಅದೂ ತಮ್ಮ ಸ್ನೇಹಿತ ಆರ್. ಬಲ್ಕಿ ಅವರ ಚುಪ್ ಸಿನಿಮಾಗಾಗಿ. ಈ ಸಿನಿಮಾದ ಕತೆಯನ್ನು ಅಮಿತಾಭ್ ಗೆ ಹೇಳಿದಾಗ ಅವರು ತಮ್ಮ ಪಿಯಾನೋದಲ್ಲಿ ಒಂದು ರಾಗ ನುಡಿಸಿ ಈ ಸಿನಿಮಾದ ಸಾರ ಇದುವೇ ಎಂದಿದ್ದರಂತೆ.
ಇದೇ ಕಾರಣಕ್ಕೆ ಆರ್ ಬಲ್ಕಿ ಅಮಿತಾಭ್ ಗೆ ಇದೇ ಟ್ಯೂನ್ ನ್ನು ತಮ್ಮ ಸಿನಿಮಾದಲ್ಲಿ ಬಳಸುವುದಾಗಿ ಕೇಳಿಕೊಂಡರಂತೆ. ಅದಕ್ಕೆ ಅಮಿತಾಭ್ ಕೂಡಾ ಒಪ್ಪಿದ್ದು, ಅಮಿತಾಭ್ ನುಡಿಸಿದ ರಾಗ ಈಗ ಸಿನಿಮಾದಲ್ಲಿ ಹಾಡಾಗಿ ಬರಲಿದೆ.