Animal movie review: ಅನಿಮಲ್ ಸಿನಿಮಾದುದ್ದಕ್ಕೂ ರಣಬೀರ್ ಹವಾ

ಶುಕ್ರವಾರ, 1 ಡಿಸೆಂಬರ್ 2023 (11:44 IST)
ಮುಂಬೈ: ರಣಬೀರ್ ಕಪೂರ್ ನಾಯಕರಾಗಿರುವ ಬಹುನಿರೀಕ್ಷಿತ ಅನಿಮಲ್ ಸಿನಿಮಾ ಇಂದು ವಿಶ್ವದಾದ್ಯಂತ ಥಿಯೇಟರ್ ಗಳಲ್ಲಿ ಬಿಡುಗಡೆಯಾಗಿದೆ.

ಬೆಳ್ಳಂ ಬೆಳಿಗ್ಗೆ ಫಸ್ಟ್ ಶೋ ನೋಡಲು ಥಿಯೇಟರ್ ಗಳ ಮುಂದೆ ಫ್ಯಾನ್ಸ್ ಜಮಾಯಿಸಿದ್ದರು. ಸಿನಿಮಾ ನೋಡಿದ ಎಲ್ಲರೂ ರಣಬೀರ್ ಅಭಿನಯಕ್ಕೆ ಫಿದಾ ಆಗಿದ್ದಾರೆ. ಜೊತೆಗೆ ಇಡೀ ಸಿನಿಮಾ ಪೂರ್ತಿ ರಣಬೀರ್ ಆವರಿಸಿಕೊಂಡಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಚಿತ್ರದ ಮೊದಲಾರ್ಧ ತುಂಬಾ ಚೆನ್ನಾಗಿದೆ. ದ್ವಿತೀಯಾರ್ಧ ಕೊಂಚ ತಲೆನೋವು ತರಿಸುವಂತಿದೆ. ಹಾಗಿದ್ದರೂ ರಣಬೀರ್ ಅಭಿನಯ ಎಲ್ಲವನ್ನೂ ಮರೆಸುತ್ತದೆ ಎಂಬುದು ವೀಕ್ಷಕರ ಅಭಿಪ್ರಾಯ. ವಿಶೇಷವೆಂದರೆ ರಣಬೀರ್‍ ಪಾತ್ರ ನೋಡಿದರೆ ಅರ್ಜುನ್ ರೆಡ್ಡಿಯಲ್ಲಿ ವಿಜಯ್ ದೇವರಕೊಂಡ ಮಾಡಿದ್ದ ಪಾತ್ರ ನೆನಪಿಸುವಂತಿದೆ.ಆಕ್ಷನ್ ಸೀಕ್ವೆನ್ಸ್ ಗಳೇ ಚಿತ್ರದ ಹೈಲೈಟ್. ಸಾಹಸ ದೃಶ್ಯಗಳು ಟಾಲಿವುಡ್ ಸಿನಿಮಾ ಶೈಲಿಯಲ್ಲಿದೆ.

ರಶ್ಮಿಕಾ ಮಂದಣ್ಣ ಪಾತ್ರಕ್ಕೆ ಇನ್ನೂ ಹೆಚ್ಚು ಸ್ಕೋಪ್ ಇದ್ದರೆ ಚೆನ್ನಾಗಿತ್ತು ಎನ್ನುತ್ತಿದ್ದಾರೆ ಫ್ಯಾನ್ಸ್. ಆದರೂ ಸಿಕ್ಕ ಪಾತ್ರವನ್ನು ಅವರು ಚೊಕ್ಕವಾಗಿ ನಿಭಾಯಿಸಿದ್ದಾರೆ. ಅರ್ಜುನ್ ರೆಡ್ಡಿಯಂತಹ ರೌಡಿಸಂ ಪ್ಲಸ್ ರೊಮ್ಯಾಂಟಿಕ್ ಕಾಂಬಿನೇಷನ್ ನ ಸಿನಿಮಾ ಇಷ್ಟಪಟ್ಟವರಿಗೆ ಈ ಸಿನಿಮಾವೂ ಇಷ್ಟವಾಗಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ