ರಣಬೀರ್ ಗೆ ರಶ್ಮಿಕಾ ಅದೆಷ್ಟು ಬಾರಿ ಲಿಪ್ ಲಾಕ್ ಮಾಡ್ತಾರೋ!

ಶನಿವಾರ, 28 ಅಕ್ಟೋಬರ್ 2023 (15:43 IST)
ಮುಂಬೈ: ಅನಿಮಲ್ ಸಿನಿಮಾದಲ್ಲಿ ರಣಬೀರ್ ಕಪೂರ್ ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಅಭಿನಯಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ರಣಬೀರ್ ಪತ್ನಿಯಾಗಿ ರಶ್ಮಿಕಾ ಕಾಣಿಸಿಕೊಂಡಿದ್ದಾರೆ.

ಸಿನಿಮಾದ ಮೊದಲ ಹಾಡಿನಲ್ಲಿ ರಶ್ಮಿಕಾ ರಣಬೀರ್ ಗೆ ಲಿಪ್ ಲಾಕ್ ಮಾಡುವ ದೃಶ್ಯಗಳು ಈಗಾಗಲೇ  ವೈರಲ್ ಆಗಿತ್ತು. ಇದೀಗ ಚಿತ್ರದ ಮತ್ತೊಂದು ಹಾಡು ಬಿಡುಗಡೆಯಾಗಿದ್ದು ಅದರಲ್ಲೂ ರಶ್ಮಿಕಾ ನಾಯಕ ರಣಬೀರ್ ಗೆ ಲಿಪ್ ಲಾಕ್ ಮಾಡುವ ದೃಶ್ಯವಿದೆ.

ಇದನ್ನು ನೋಡಿದ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ನೀವು ಈ ಪಾಟಿ ರಣಬೀರ್ ತುಟಿಗೆ ತುಟಿ ಒತ್ತುತ್ತಿದ್ದರೆ ವಿಜಯ್ ದೇವರಕೊಂಡ ಕತೆಯೇನು ಎಂದು ಕೆಲವರು ರಶ್ಮಿಕಾ ಕಾಲೆಳೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ