ಬಾಲಿವುಡ್ ನಲ್ಲಿ ಮತ್ತೊಂದು ದಾಂಪತ್ಯ ಮುರಿದು ಬಿತ್ತು!

ಗುರುವಾರ, 8 ಡಿಸೆಂಬರ್ 2016 (10:43 IST)
ಮುಂಬೈ: ಝಲಕ್ ದಿಕ್ ಲಾಜಾ ಹಾಡಿನಿಂದ ಯುವಜನತೆಯನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದ ಸಂಗೀತ ನಿರ್ದೇಶಕ ಕಮ್ ಗಾಯಕ ಹಿಮೇಶ್ ರೇಶಿಮಿಯಾ ತಮ್ಮ 22 ವರ್ಷಗಳ ದಾಂಪತ್ಯ ಜೀವನವನ್ನು ಕಡಿದುಕೊಂಡಿದ್ದಾರೆ.

ಹಿಮೇಶ್ ಮತ್ತು ಪತ್ನಿ ಕೋಮಲ್ ಸಂಬಂಧದಲ್ಲಿ ಬಿರುಕು ಮೂಡಿದ್ದು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಬಾಂದ್ರಾ ಕೌಟುಂಬಿಕ ನ್ಯಾಯಾಲಯದಲ್ಲಿ ಹಿಮೇಶ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರಂತೆ.

ಹಾಗಂತ ಬೀದಿಯಲ್ಲಿ ಕಚ್ಚಾಡುವ ಯಾವ ಉದ್ದೇಶವೂ ಇವರಿಗಿಲ್ಲವಂತೆ. “ನಾವಿಬ್ಬರೂ ಪರಸ್ಪರ ಗೌರವದಿಂದ ಬೇರಾಗಲು ತೀರ್ಮಾನಿಸಿದ್ದೇವೆ. ಮುಂದೆಯೂ ನಮ್ಮಿಬ್ಬರ ಕುಟುಂಬದವರ ಜತೆಗೆ ಗೌರವದಿಂದ ಬದುಕುತ್ತೇವೆ. ನಮ್ಮ ಕುಟುಂಬದವರೂ ಇದಕ್ಕೆ ಒಪ್ಪಿದ್ದಾರೆ” ಎಂದು ಹಿಮೇಶ್ ಹೇಳಿಕೊಂಡಿದ್ದಾರೆ. ಅಂತೂ ಬಾಲಿವುಡ್ ನಲ್ಲಿ ಮತ್ತೊಂದು ಕುಟುಂಬ ಒಡೆದ ಮನೆಯಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ