ಎನ್ ಸಿಬಿ ಕಚೇರಿಯಲ್ಲೇ ಆಯ್ತು ಆರ್ಯನ್ ಖಾನ್ ಬರ್ತ್ ಡೇ
ಡ್ರಗ್ ಕೇಸ್ ನಲ್ಲಿ ಇತ್ತೀಚೆಗಷ್ಟೇ ಜಾಮೀನು ಪಡೆದು ಹೊರಬಂದಿರುವ ಆರ್ಯನ್ ಗೆ ಈಗಲೂ ವಾರಕ್ಕೊಮ್ಮೆ ಎನ್ ಸಿಬಿ ಕಚೇರಿಗೆ ಬಂದು ಸಹಿ ಮಾಡಬೇಕು. ಅಲ್ಲದೇ, ಎನ್ ಸಿಬಿ ಅಧಿಕಾರಿಗಳು ಮೊನ್ನೆಯಷ್ಟೇ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿದ್ದರು.
ಹೀಗಾಗಿ ಈ ಬಾರಿಯ ಆರ್ಯನ್ ಬರ್ತ್ ಡೇ ಎನ್ ಸಿಬಿ ಅಧಿಕಾರಿಗಳ ಮುಂದೆಯೇ ನಡೆದಿದೆ. ಆರ್ಯನ್ ನಿನ್ನೆ ರಾತ್ರಿ ಎನ್ ಸಿಬಿ ಕಚೇರಿಗೆ ಭೇಟಿ ನೀಡಿದ್ದು, ವಿಚಾರಣೆಗೊಳಪಟ್ಟಿದ್ದಾರೆ. ಬರ್ತ್ ಡೇ ಎಂದು ಸಂಭ್ರಮಿಸಬೇಕಾದ ರಾತ್ರಿ ಎನ್ ಸಿಬಿ ಅಧಿಕಾರಿಗಳ ಜೊತೆ ಕಳೆಯುವಂತಾಯಿತು.