ಬಾಲಿವುಡ್ ನಟ ಹೃತಿಕ್ ರೋಶನ್ ಅವರಿಗೆ ಸಿಕ್ಕಿದ ಗೌರವ ಏನು ಗೊತ್ತಾ...?

ಬುಧವಾರ, 17 ಜನವರಿ 2018 (06:31 IST)
ಮುಂಬೈ : ಬಾಲಿವುಡ್ ನಟ ಮ್ಯಾನ್ ಆಫ್ ದಿ ಪ್ಲಾನೆಟ್ ಎಂಬ ಟೈಟಲ್ ಪಡೆದಿರುವ ಹೃತಿಕ್ ರೋಶನ್ ಅವರು ಈಗ ‘ಜಗತ್ತಿನ ಅತ್ಯಂತ  ಸ್ಪುರದ್ರೂಪಿ  ನಟ  2018’ ಗೌರವಕ್ಕೆ ಪಾತ್ರರಾಗಿದ್ದಾರೆ.

 
ಜಗತ್ತಿನಾದ್ಯಂತ ಇರುವ ಫ್ಯಾನ್ ಫಾಲೋಯಿಂಗ್ ಹಾಗು ಅವರು ಮಾಡಿಕೊಂಡಿರುವ ಜಾಹೀರಾತು ಒಡಂಬಡಿಕೆ ಗಳ ಆಧಾರದ ಮೇಲೆ ಈ ಆಯ್ಕೆಯನ್ನು ಮಾಡಲಾಗಿದೆ. ಹಾಲಿವುಡ್ ನ ಸುರ ಸುಂದರಾಂಗ ನಟರಾದ ರಾಬರ್ಟ್ ಪ್ಯಾಟಿಸನ್ ಹಾಗು ಕ್ರಿಸ್ ಇವಾನ್ಸ್ ಅವರನ್ನು ಹಿಂದಿಕ್ಕಿ ಹೃತಿಕ್ ರೋಶನ್ ಅವರು ‘ಜಗತ್ತಿನ ಅತ್ಯಂತ ಸ್ಪುರದ್ರೂಪಿ ನಟ 2018’ ರ ಪ್ರಥಮ ಸ್ಥಾನ ಪಡೆದಿದ್ದಾರೆ. ಜಗತ್ತಿನ ಅತ್ಯಂತ ಸ್ಪುರದ್ರೂಪಿ ಟಾಪ್ 10 ರಲ್ಲಿ ಬಾಲಿವುಡ್ ಮತ್ತೊಬ್ಬ ನಟ ಸಲ್ಮಾನ್ ಖಾನ್ ಅವರು 5ನೇ ಸ್ಥಾನ ಪಡೆದುಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ