ಬಾಲಿವುಡ್ ನಟ ಇಂದರ್ ಕುಮಾರ್ ಹೃದಯಾಘಾತದಿಂದ ವಿಧಿವಶ

ಶುಕ್ರವಾರ, 28 ಜುಲೈ 2017 (15:35 IST)
ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಆಪ್ತ ಸ್ನೇಹಿತ, ನಟ ಇಂದರ್ ಕುಮಾರ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರಿಗೆ 43 ವರ್ಷ ವಯಸ್ಸಾಗಿತ್ತು. 
 
ಅಂಧೇರಿಯಲ್ಲಿರುವ ಫ್ಲ್ಯಾಟ್‌ನಲ್ಲಿ ಇಂದು ನಸುಕಿನ ವೇಳೆ 2 ಗಂಟೆಯ ಸುಮಾರಿಗೆ ಹೃದಯಾಘಾತದಿಂದ ಇಂದರ್‌ ಕುಮಾರ್‌ ಕೊನೆಯುಸಿರೆಳೆದಿರುವುದಾಗಿ  ಕುಟುಂಬ ಮೂಲಗಳು ತಿಳಿಸಿವೆ. ಬಾಲಿವುಡ್ ನಲ್ಲಿ 20ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಇಂದರ್‌ ಕುಮಾರ್‌  ಏಕ್ತಾ ಕಪೂರ್‌ ಅವರ ಜನಪ್ರಿಯ ಟಿವಿ ಶೋ 'ಕ್ಯೂಂಕಿ ಸಾಸ್‌ ಭಿ ಕಭೀ ಬಹು ಥಿ'ನಲ್ಲಿ ಮಿಹಿರ್‌ ವಿರಾನಿ ಪಾತ್ರ ನಿರ್ವಹಿಸಿ ಜನಪ್ರಿಯರಾಗಿದ್ದರು.
 
’ತಿರ್ಚಿ ಟೋಪಿವಾಲೆ', 'ಕಹೀ ಪ್ಯಾರ್‌ ನಾ ಸೋ ಜಾಯೆ', 'ಪೇಯಿಂಗ್‌ ಗೆಸ್ಟ್‌,'ತುಮ್‌ಕೋ ನ ಭೂಲ್‌ ಪಾಯೆಂಗೆ', 'ವಾಂಟೆಡ್‌' ಮೊದಲಾದವುಗಳು ಅವರ ಪ್ರಮುಖ ಚಿತ್ರಗಳು. 'ಪಾಟಿ ಪೆಯ್ಡ ಹೆ ಯಾರ್‌' ಚಿತ್ರ ಇನ್ನಷ್ಟೆ ಬಿಡುಗಡೆಯಾಗಬೇಕಿದೆ.
 

ವೆಬ್ದುನಿಯಾವನ್ನು ಓದಿ