ದರ್ಶನ್ ಒಂದು ಮಾತು ಎಲ್ಲವನ್ನೂ ನಿಭಾಯಿಸಬಹುದಿತ್ತು: ನಟಿ ರಮ್ಯಾ

Sampriya

ಸೋಮವಾರ, 28 ಜುಲೈ 2025 (20:27 IST)
ಬೆಂಗಳೂರು:  ನಟ ದರ್ಶನ್ ಅವರು ಈ ಹಿಂದೆ ಒಂದು ಮಾತು ಹೇಳ್ತಿದ್ರೆ ರೇಣುಕಾಸ್ವಾಮಿ ಪ್ರಕರಣ ನಡೆಯುತ್ತಿರಲಿಲ್ವೇನು ಎಂದು ನಟಿ ರಮ್ಯಾ ಅವರು ಪೊಲೀಸ್ ಕಮಿಷನರ್‌ಗೆ ದೂರು ನೀಡಿದ ಬಳಿಕ ಪ್ರತಿಕ್ರಿಯಿಸಿದ್ದಾರೆ. 

ದರ್ಶನ್ ಅವರು ತಮ್ಮ ಅಭಿಮಾನಿಗಳಿಗೆ ಯಾರಿಗೂ ಕೆಟ್ಟ ಮೆಸೇಜ್ ಮಾಡದಂತೆ ಈ ಹಿಂದೆಯೇ ಹೇಳುತ್ತಿದ್ದರೆ ರೇಣುಕಾಸ್ವಾಮಿ ಪ್ರಕರಣ ನಡೆಯುತ್ತಿರಲಿಲ್ಲ ಅನ್ಸುತ್ತೆ. ರೇಣುಕಾಸ್ವಾಮಿ ದರ್ಶನ್ ಅವರ ಅಭಿಮಾನಿ ಆಗಿರುವುದರಿಂದ ಈ ಹಿಂದೆಯೇ ದರ್ಶನ್‌ ಅವರು ಕಿವಿಮಾತನ್ನು ಹೇಳುತ್ತಿದ್ದರೆ ಇಷ್ಟೆಲ್ಲಾ ನಡೆಯುತ್ತಿರಲಿಲ್ಲ ಎಂದರು. 

ಇನ್ನೂ ನಟಿ ರಕ್ಷಿತಾ ಹಾಗೂ ದರ್ಶನ್ ಪತ್ನಿ ವಿಜಯಲಕ್ಷ್ಮಿ ಇನ್‌ಸ್ಟಾಗ್ರಾಂ ಪೋಸ್ಟ್‌ ಸಂಬಂಧ ಪ್ರತಿಕ್ರಿಯಿಸಿದ ಅವರು, ಅವರಿಬ್ಬರು ನನ್ನ ವಿಚಾರವಾಗಿ ಪೋಸ್ಟ್ ಹಾಕಿಲ್ಲ ಅನ್ಸುತ್ತೆ. ವಿಜಿ ಅವರು ಅವರ ವಿಚಾರವಾಗಿ ಹೇಳಿರಬೇಕು, ಇನ್ನೂ ರಕ್ಷಿತಾ ಅವರ ಪೋಸ್ಟ್ ಇದಕ್ಕೂ ಸಂಬಂಧಿಸಿದ್ದಲ್ಲ ಅನ್ಸುತ್ತೆ ಎಂದರು. 

ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಹಾಗೂ ನಟಿ ರಕ್ಷಿತಾ ಅವರು ಹಾಕಿದ ಪೋಸ್ಟ್ ಬಗ್ಗೆ ಮಾತನಾಡಿದ ರಮ್ಯಾ ಅವರು ನನ್ನ ಬಗ್ಗೆ ಹಾಕಿಲ್ಲ ಅನಿಸುತ್ತದೆ. ಆ ಬಗ್ಗೆ ಮಾತನಾಡುವುದು ಏನು ಇಲ್ಲ. ದರ್ಶನ್ ಅವರ ನಂಬರ್​ ಕೂಡ ನನ್ನ ಬಳಿ ಇಲ್ಲ. ರೇಣುಕಾಸ್ವಾಮಿ ಕೇಸ್​ಗೂ ಮೊದಲು ಅವರು ಒಮ್ಮೆ ಮದುವೆಯಲ್ಲಿ ಸಿಕ್ಕಿದ್ದರು ಅಷ್ಟೇ. ದರ್ಶನ್ ಅವರು ಒಮ್ಮೆ ಅಭಿಮಾನಿಗಳಿಗೆ ಮನವರಿಕೆ ಮಾಡಬೇಕು. ಫ್ಯಾನ್ಸ್​​ಗೆ ಅವರು ಹೇಳಬೇಕು ಎಂದು ಹೇಳಿದ್ದಾರೆ.

ಇನ್ನೂ ದರ್ಶನ್ ಫ್ಯಾನ್ಸ್ ಅವರಿಂದ ಬರುತ್ತಿರುವ ಅಶ್ಲೀಲ ಮೆಸೇಜ್ ಸಂಬಂಧ ನಟಿ ರಮ್ಯಾ ಅವರು 43ಅಕೌಂಟ್ಸ್‌ಗಳ ವಿರುದ್ಧ ಪೊಲೀಸ್ ಕಮಿಷನರ್‌ಗೆ ದೂರು ನೀಡಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ