‘ಭಾಗಿ-2' ಚಿತ್ರದಲ್ಲಿ ಟೈಗರ್ ಶ್ರಾಫ್ ಸಾಹಸ ನೋಡಿ ಮೆಚ್ಚಿಗೆಯ ಸುರಿಮಳೆ ಗೈದ ಬಾಲಿವುಡ ಸ್ಟಾರ್ ನಟರು!

ಗುರುವಾರ, 5 ಏಪ್ರಿಲ್ 2018 (07:42 IST)
ಮುಂಬೈ : ಇತ್ತೀಚೆಗಷ್ಟೇ ಬಿಡುಗಡೆಯಾದ ಬಾಲಿವುಡ್ ನಟ ಟೈಗರ್ ಶ್ರಾಫ್ ಅಭಿನಯಿಸಿದ ‘ಭಾಗಿ-2’ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಬಿಡುಗಡೆಗೊಂಡ ಕೇವಲ ಎರಡೇ ದಿನಗಳಲ್ಲಿ 45.50 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಚಿತ್ರದ ಆಕ್ಷನ್ ದೃಶ್ಯಗಳನ್ನು ನೋಡಿ ಇದೀಗ ಬಾಲಿವುಡ್ ನ ಸ್ಟಾರ್ ನಟರು ಟೈಗರ್ ಶ್ರಾಫ್ ಅವರ  ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


‘ಭಾಗಿ-2' ಚಿತ್ರದಲ್ಲಿ ಟೈಗರ್ ಶ್ರಾಫ್ ಸಾಹಸ ನೋಡಿ ನಟ ಅಕ್ಷಯ್ ಕುಮಾರ್ ಅವರು,’ ಬಹಳ ಹೆಮ್ಮೆಯಿಂದ ಹೇಳುತ್ತೇನೆ. ನೀನು ನಮ್ಮ ಇಂಡಸ್ಟ್ರಿಯ ಟೋನಿ ಜಾ'' ಎಂದು ಮಾರ್ಷಲ್ ಆರ್ಟ್ಸ್ ನಲ್ಲಿ ಅತ್ಯಾದ್ಭುತ ಸಾಧನೆ ಮಾಡಿರುವ ಥೈಲ್ಯಾಂಡ್ ನಟ ಟೋನಿ ಜಾ ಅವರಿಗೆ ಹೋಲಿಸಿದ್ದಾರೆ.


ಈ ಬಗ್ಗೆ ನಟ ಹೃತಿಕ್ ರೋಷನ್ ಅವರು,’ನಾನು ಬೆಸ್ಟ್ ಆಕ್ಷನ್ ಹೀರೋ ಜೊತೆಯಲ್ಲಿ ಕೆಲಸ ಮಾಡಲು ಕಾಯುತ್ತಿದ್ದೇನೆ ‘ ಎಂದು ಹೇಳುವ ಮೂಲಕ ಬಾಲಿವುಡ್ ಗೆ ಹೊಸ ಆಕ್ಷನ್ ಹೀರೋ ಸಿಕ್ಕಿದ್ದಾನೆಂದು ಹೊಗಳಿದ್ದಾರೆ. ಹಾಗೇ ನಟ ಅನಿಲ್ ಕಪೂರ್ ಅವರು,’ ಇಡೀ ಭಾರತದ ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಿದಿಯಾ'' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ