ಬಾಲಿವುಡ್ ಹಿರಿಯ ನಟ ವಿನೋದ್ ಖನ್ನಾ ಇನ್ನಿಲ್ಲ

ಗುರುವಾರ, 27 ಏಪ್ರಿಲ್ 2017 (14:23 IST)
ಕ್ಯಾನ್ಸರ್`ನಿಂದ ಬಳಲುತ್ತಿದ್ದ ಬಾಲಿವುಡ್`ನ ಹಿರಿಯ ವಿನೋದ್ ಖನ್ನಾ (70) ವಿಧಿವಶರಾಗಿದ್ದಾರೆ. ಮುಂಬೈನ ಎಚ್.ಎನ್. ರಿಲಯನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿನೋದ್ ಖನ್ನಾ ಚಿಕಿತ್ಸೆ ಫಲಿಸದೇ ಬೆಳಗ್ಗೆ 11.20ಕ್ಕೆ ನಿಧನರಾಗಿದ್ದಾರೆ.

ಮೂತ್ರಕೋಶ ಕ್ಯಾನ್ಸರ್`ನಿಂದ ಬಳಲುತ್ತಿದ್ದ ವಿನೋದ್ ಖನ್ನಾ ತೀವ್ರ ನಿರ್ಜಲೀಕರಣದಿಂದ ಮಾರ್ಚ್ 31ರಂದು ಆಸ್ಪತ್ರೆಗೆ ದಾಖಲಾಗಿದ್ದರು.ಬಳಿಕ ಅವರು ಎದ್ದು ಕೂರಲಾಗದ್ದಷ್ಟು ನಿತ್ರಾಣರಾಗಿದ್ದ ಫೋಟೋ ಆನ್ ಲೈನ್`ನಲ್ಲಿ ವೈರಲ್ ಆಗಿತ್ತು. ಪತ್ನಿ ವಿತಾ ಖನ್ನಾ ಮತ್ತು ನಾಲ್ವರು ಮಕ್ಕಳನ್ನ ಅಗಲಿದ್ದಾರೆ.

1969ರಲ್ಲಿ ಅಣ್ಣ ಪಾತ್ರಗಳ ಮೂಲಕ ಸಿನಿ ಜರ್ನಿ ಆರಂಭಿಸಿದ ವಿನೋದ್ ಖನ್ನಾ, ಮುಖಾದರ್ ಕ ಸಿಖಂದರ್, ಮೇರೆ ಅಪ್ನೆ, ಪರ್ವರಿಶ್, ಖುರ್ಬಾನಿ, ದಯವಾನ್, ಇನ್ಸಾಫ್, ಚಾಂದಿನಿ, ದಿ ಬರ್ನಿಂಗ್ ಟ್ರೇನ್, ಅಮರ್ ಅಕ್ಬರ್ ಆಂಥೋನಿಯಂತಹ ಹಿಟ್ ಮೂವಿಗಳನ್ನ ಕೊಟ್ಟಿದ್ದಾರೆ. ಬಿಜೆಪಿಯಿಂದ ಸಂಸದರೂ ಆಗಿದ್ದರು.

ವಿನೋದ್ ಖನ್ನಾ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಬಿಗ್ ಬಿ ಅಮಿತಾಬ್ ಬಚ್ಚನ್ ಸರ್ಕಾರ್-3 ಪ್ರಚಾರ ಕಾರ್ಯಕ್ರಮವನ್ನ ಅರ್ಧಕ್ಕೆ ನಿಲ್ಲಿಸಿ ಪಾರ್ಥಿವ ಶರೀರದ ದರ್ಶನಕ್ಕೆ ತೆರಳಿದ್ದಾರೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ