ಬ್ರಹ್ಮೋತ್ಸವಮ್ ಚಿತ್ರ ರಿಲೀಸ್ ಮೇ 20ಕ್ಕೆ, ಹೊಸ ಅವತಾರದಲ್ಲಿ ಮಹೇಶ್ ಬಾಬು

ಗುರುವಾರ, 28 ಏಪ್ರಿಲ್ 2016 (16:39 IST)
ಪ್ರಿನ್ಸ್ ಮಹೇಶ್ ಬಾಬು ಅಭಿನಯದ ಬ್ರಹ್ಮೋತ್ಸವಮ್ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಕಡೆಗೂ ಚಿತ್ರ ರಿಲೀಸ್‌ಗೆ ಡೇಟ್ ಫಿಕ್ಸ್ ಆಗಿದೆ. ಮೇ 20ರಂದು ಚಿತ್ರ ರಿಲೀಸ್ ಆಗಲಿದ್ದು. ಇನ್ನೂ ಮೇ 7ರಂದು ಚಿತ್ರದ ಆಡಿಯೋ ರಿಲೀಸ್ ಆಗಲಿದೆ. ಇನ್ನೂ ಚಿತ್ರದ ಪೋಸ್ಟರ್‌ನ್ನು ಮಹೇಶ್ ಬಾಬು ಬಿಡುಗಡೆ ಮಾಡಿದ್ದಾರೆ. ಪೋಸ್ಟರ್‌ನಲ್ಲಿ ಮಹೇಶ್ ಬಾಬು, ಸ್ಲೋ ಮೋಷನ್ ಬೈಕ್ ನಲ್ಲಿ ಹೋಗುತ್ತಿರುವ ಪೋಸ್ಟರ್ ಇಲ್ಲಿ ಕಾಣಬಹುದು.
ಪ್ರಿನ್ಸ್ ಮಹೇಶ್ ಬಾಬು ಅವರ ಬಿಗ್ ಟಿಕೆಟ್ ಚಿತ್ರ ಅಂತ ಹೇಳಲಾಗ್ತಿರೋ ಬ್ರಹ್ಮೋತ್ಸವ ಚಿತ್ರವು ಸಾಕಷ್ಟು ನಿರೀಕ್ಷೆ ಮೂಡಿಸಿದೆ. 
 
ಇನ್ನೂ ಚಿತ್ರದ ಪೋಸ್ಟರ್‌ನ್ನು ಮಹೇಶ್ ಬಾಬು ಬಿಡುಗಡೆ ಮಾಡಿದ್ದಾರೆ. ಪೋಸ್ಟರ್‌ನಲ್ಲಿ ಮಹೇಶ್ ಬಾಬು, ಸ್ಲೋ ಮೋಷನ್ ಬೈಕ್ ನಲ್ಲಿ ಹೋಗುತ್ತಿರುವ ಪೋಸ್ಟರ್ ಇಲ್ಲಿ ಕಾಣಬಹುದು.ಮಹೇಶ್ ಬಾಬು ಮೂವರ ನಾಯಕಿಯರ ಜತೆ ಡ್ಯೂಯೇಟ್ ಹಾಡಲಿದ್ದಾರೆ.. 
 
ಈಗಾಗಲೇ ತೆಲಗು ಚಿತ್ರರಂಗದಲ್ಲಿ ನಾಗಾರ್ಜುನ ಅಭಿನಯದ ಓಪರಿ ಚಿತ್ರ ಹಾಗೂ ಪವನ್ ಕಲ್ಯಾಣ್ ಅಭಿನಯದ ಸರ್ದಾರ್ ಗಬ್ಬರ್ ಸಿಂಗ್ ಚಿತ್ರಗಳು ತೆಲಗು ಚಿತ್ರರಂಗದಲ್ಲಿ ಚರ್ಚೆ ಜೋರಾಗಿದೆ.ಮಹೇಶ್ ಬಾಬು ಅಭಿನಯದ ಬ್ರಹ್ಮೋತ್ಸವಮ್ ಚಿತ್ರ ಸುದ್ದಿ ಮಾಡಲು ರೆಡಿಯಾಗಿದೆ. ಅದಕ್ಕಾಗಿ ಮಹೇಶ್ ಬಾಬು ಅಭಿಮಾನಿಗಳು ಮೇ ವರೆಗೂ ಕಾಯಲೇಬೇಕು. 
 
ತಿರುಪತಿಯಲ್ಲಿ ಮೇ 7ಕ್ಕೆ ಆಡಿಯೋ ರಿಲೀಸ್ ಆಗಲಿದೆ. ಚಿತ್ರದ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ ಮೆಕ್ಕಿ ಮೇಯರ್. ಬ್ರಹ್ಮೋತ್ಸವ ಚಿತ್ರ ಅಪ್ಪಟ ಕೌಟುಂಬಿಕ ಚಿತ್ರಗಳಲ್ಲಿ ಒಂದಾಗಿದೆ. ಇನ್ನೂ ಈ ಬಾರಿ ಬ್ರಹ್ಮೋತ್ಸವ ಚಿತ್ರದಲ್ಲಿ ಮೂವರು ನಾಯಕಿಯರು ಇರುವುದರಿಂದ ಹರೆಯದ ಹುಡುಗರಿಗೆ ಹಬ್ಬವಾಗುವುದರಲ್ಲಿ ಡೌಟ್ ಇಲ್ಲ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ