ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ವಿರುದ್ಧ ಕ್ರಿಮಿನಲ್ ಕೇಸ್
ಭಾನುವಾರ, 5 ಜನವರಿ 2020 (09:28 IST)
ಮುಂಬೈ: ‘ಛಪಕ್’ ಎಂಬ ಟೈಟಲ್ ನಲ್ಲಿ ಆಸಿಡ್ ದಾಳಿಗೊಳಗಾದ ಯುವತಿಯ ಕುರಿತು ನೈಜ ಘಟನೆಯಾಧಾರಿತ ಸಿನಿಮಾ ಮಾಡಿರುವ ನಟಿ ದೀಪಿಕಾ ಪಡುಕೋಣೆ ಮತ್ತು ಆ ಸಿನಿಮಾ ನಿರ್ದೇಶಕ ಮೇಘನಾ ಗುಲ್ಜಾರ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿದೆ.
ಈ ಸಿನಿಮಾದ ಸ್ಕ್ರಿಪ್ಟ್ ನನ್ನದು ಎಂದು ನಿರ್ಮಾಪಕ ರಾಕೇಶ್ ಭಾರ್ತಿ ಎಂಬವರು ನ್ಯಾಯಾಲಯಕ್ಕೆ ಕೃತಿ ಚೌರ್ಯ ಮಾಡಿದ ಆರೋಪದಲ್ಲಿ ದೂರು ಸಲ್ಲಿಸಿದ್ದಾರೆ. ಇದು ಕ್ರಿಮಿನಲ್ ಕೇಸ್ ಆಗಿದ್ದು ಇದು ಸಾಬೀತಾದರೆ ಗಂಭೀರ ಶಿಕ್ಷೆ ಅನುಭವಿಸಬೇಕಾಗುತ್ತದೆ.
ಹೀಗಾಗಿ ಬಿಡುಗಡೆಗೂ ಮುನ್ನ ಛಪಕ್ ಸಿನಿಮಾ ತಂಡ ಸಂಕಷ್ಟಕ್ಕೀಡಾಗಿದೆ. ಈ ಸಿನಿಮಾದ ಟ್ರೈಲರ್ ಗಳು ಈಗಾಗಲೇ ಹಿಟ್ ಆಗಿದ್ದು, ಆಸಿಡ್ ದಾಳಿಗೊಳಗಾದ ಯುವತಿಯ ಪಾತ್ರದಲ್ಲಿರುವ ದೀಪಿಕಾ ನಟನೆಯ ಬಗ್ಗೆ ಭಾರೀ ಹೊಗಳಿಕೆ ವ್ಯಕ್ತವಾಗಿದೆ.