ಥೈಲ್ಯಾಂಡ್ ಬೀಚ್ ನಲ್ಲಿ ಗೆಳತಿ ಕೆಎಲ್ ರಾಹುಲ್ ಜತೆ ಅಥಿಯಾ ಶೆಟ್ಟಿ ಹಾಟ್ ಫೋಟೋ ವೈರಲ್

ಬುಧವಾರ, 1 ಜನವರಿ 2020 (10:49 IST)
ಮುಂಬೈ: ಕನ್ನಡಿಗ ಕ್ರಿಕೆಟಿಗ ಕೆಎಲ್ ರಾಹುಲ್ ಹೊಸ ವರ್ಷಾಚರಣೆ ಮಾಡಲು ತಮ್ಮ ಆಪ್ತರ ಜತೆಗೆ ಥೈಲ್ಯಾಂಡ್ ಪ್ರವಾಸ ಮಾಡಿದ್ದಾರೆ. ರಾಹುಲ್ ಜತೆಗೆ ಅವರ ಗೆಳತಿ ಅಥಿಯಾ ಶೆಟ್ಟಿ ಇರುವ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.


ರಾಹುಲ್ ಮತ್ತು ಅಥಿಯಾ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಥೈಲ್ಯಾಂಡ್ ಬೀಚ್ ನಲ್ಲಿ ಓಡಾಡುವ ಫೋಟೋಗಳನ್ನು ಪ್ರಕಟಿಸಿದ್ದಾರೆ. ರಾಹುಲ್ ಬೀಚ್ ಬದಿಯಲ್ಲಿ ಜಾಗಿಂಗ್ ಮಾಡುವ ಫೋಟೋ ಪ್ರಕಟಿಸಿದ್ದರೆ ಅಥಿಯಾ ಹಾಟ್ ಉಡುಪಿನಲ್ಲಿ ಬಿಸಿಲಿಗೆ ಮೈ ಒಡ್ಡಿ ಕುಳಿತಿರುವ ಫೋಟೋ ಪ್ರಕಟಿಸಿದ್ದಾರೆ.

ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿಯಿದ್ದರೂ ಎಲ್ಲೂ ಸಾರ್ವಜನಿಕವಾಗಿ ಒಪ್ಪಿಕೊಂಡಿಲ್ಲ. ರಾಹುಲ್ ಮತ್ತು ಅಥಿಯಾಗೆ ಅವರ ಗೆಳೆಯರೂ ಜತೆಯಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ