ನಗ್ನವಾಗಿ ಫೋಟೋಗೆ ಪೋಸ್ ಕೊಟ್ಟಿದ್ದಕ್ಕೆ ರಣವೀರ್ ಸಿಂಗ್ ಮೇಲೆ ಕೇಸ್

ಮಂಗಳವಾರ, 26 ಜುಲೈ 2022 (09:10 IST)
ಮುಂಬೈ: ಮ್ಯಾಗಜಿನ್ ಒಂದರ ಕವರ್ ಪೇಜ್ ಒಂದಕ್ಕೆ ನಗ್ನವಾಗಿ ಪೋಸ್ ಕೊಟ್ಟಿದ್ದ ಬಾಲಿವುಡ್ ನಟ ರಣವೀರ್ ಸಿಂಗ್ ಈಗ ಸಂಕಷ್ಟಕ್ಕೀಡಾಗಿದ್ದಾರೆ.

ರಣವೀರ್ ಸಿಂಗ್ ನಗ್ನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ರಣವೀರ್ ರನ್ನು ಸಾಕಷ್ಟು ಮಂದಿ ಟ್ರೋಲ್ ಮಾಡಿದ್ದರು.

ಇದೀಗ ವ್ಯಕ್ತಿಯೊಬ್ಬರು ರಣವೀರ್ ಸಿಂಗ್ ನಗ್ನ ಫೋಟೋ ಮೂಲಕ ಮಹಿಳೆಯರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಮುಂಬೈ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಪೊಲೀಸರು ಈಗ ಆ ನಿಟ್ಟಿನಲ್ಲಿ ತನಿಖೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ