ಗಂಡನ ನಗ್ನ ಫೋಟೋ ಬಗ್ಗೆ ದೀಪಿಕಾ ಪಡುಕೋಣೆ ಪ್ರತಿಕ್ರಿಯೆ ಏನಿತ್ತು ಗೊತ್ತಾ?

ಶುಕ್ರವಾರ, 22 ಜುಲೈ 2022 (17:26 IST)
ಮುಂಬೈ: ಬಾಲಿವುಡ್ ನಟ ರಣವೀರ್ ಸಿಂಗ್ ನಗ್ನ ಫೋಟೋ ಶೂಟ್ ನಡೆಸಿ ಭಾರೀ ಟ್ರೋಲ್  ಗೊಳಗಾಗಿದ್ದಾರೆ.

ಈ ಬಗ್ಗೆ ದೀಪಿಕಾ ಆಪ್ತ ಮೂಲಗಳು ಆಂಗ್ಲ ಮಾಧ್ಯಮಕ್ಕೆ ಪ್ರತಿಕ್ರಿಯಿಸಿವೆ. ದೀಪಿಕಾ ಯಾವತ್ತೂ ಗಂಡನ ಬೆಂಬಲವಾಗಿ ನಿಲ್ಲುತ್ತಾರೆ. ಈ ಫೋಟೋ ಶೂಟ್ ಬಗ್ಗೆ ಅವರಿಗೆ ಮೊದಲೇ ಮಾಹಿತಿಯಿತ್ತು. ಇದರ ಬಗ್ಗೆ ತಿಳಿಯುತ್ತಿದ್ದಂತೇ ಅವರು ಕಾತುರರಾಗಿದ್ದರು. ಹಾಗೂ ಫೋಟೋಗಳನ್ನು ಮೊದಲೇ ನೋಡಿ ಮೆಚ್ಚಿಕೊಂಡಿದ್ದರು.

ಹೀಗಾಗಿ ದೀಪಿಕಾಗೆ ರಣವೀರ್ ರ ಈ ನಗ್ನ ಫೋಟೋ ಶೂಟ್ ವೈರಲ್ ಆಗುತ್ತಿದ್ದಂತೇ ಶಾಕ್ ಆಗಿಲ್ಲ ಎಂಬುದು ಮೂಲಗಳಿಂದ ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ