ದೆಹಲಿ ಮೂಲದ ಭಾರತಿ ಜತೆಗೆ ರಣಬೀರ್ ಕಪೂರ್ ಡೇಟಿಂಗ್ ನಡೆಸುತ್ತಿಲ್ಲ
ಶುಕ್ರವಾರ, 20 ಮೇ 2016 (16:41 IST)
ಕೆಲ ದಿನಗಳ ಹಿಂದೆ ರಣಬೀರ್ ನೂತನ ಗೆಳತಿ ಜತೆ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಹೇಳಲಾಗ್ತಿತ್ತು. ಆದರೆ ಇದಕ್ಕೆಲ್ಲ ಇದೀಗ ತೆರೆ ಬಿದ್ದಿದೆ. ರಣಬೀರ್ ಹಾಗೂ ದೆಹಲಿ ಮೂಲದ ಹುಡುಗಿ ಜತೆ ರಣಬೀರ್ ಡೇಟಿಂಗ್ ನಡೆಸುತ್ತಿಲ್ಲ. ಈ ಕುರಿತು ಭಾರತಿ ಹೇಳಿಕೊಂಡಿದ್ದಾರೆ.
ರಣಬೀರ್ ಹೊಸ ಗರ್ಲ್‌ಫ್ರೆಂಡ್ ಎಂದು ಹೇಳಲಾಗ್ತಿದ್ದ ದೆಹಲಿ ಮೂಲದ ಯುವತಿ ಭಾರತಿ ಡೇಟಿಂಗ್ ನಡೆಸುತ್ತಿರುವ ಫೋಟೊಗಳು ಇದೀಗ ಲಭ್ಯವಾಗಿವೆ. ಅದಲ್ಲದೇ ಭಾರತಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭಾರತಿ ನಾನು ರಣಬೀರ್ ಜತೆಗೆ ಡೇಟಿಂಗ್ ನಡೆಸುವುದು ಸಾಧ್ಯವಿಲ್ಲ... ನಾನು ರಣಬೀರ್‌ರನ್ನ 6 ತಿಂಗಳ ಹಿಂದೆ ಭೇಟಿ ಮಾಡಿದ್ದೆ. ಆದರೆ ನಾನು ಇದೀಗ ಸದ್ಯ ಪ್ರತೀಕ ಚೌಧರಿ ಎಂಬ ಯುವಕನ ಜತೆ ರಿಲೇಷನ್‌ಶಿಪ್ ಹೊಂದಿರುವುದಾಗಿ ತಿಳಿಸಿದ್ದಾರೆ.
ಇನ್ನೂ ಮೊರಾಕೋ ದಲ್ಲಿರುವ ರಣಬೀರ್ ಅಲ್ಲಿಯೇ ದೆಹಲಿ ಮೂಲದ ಯುವತಿ ಜತೆಗೆ ಡೇಟಿಂಗ್ ನಡೆಸುತ್ತಿದ್ದರು ಎಂದು ವದಂತಿ ಹರಡಿತ್ತು.. ಆದರೆ ಭಾರತಿ ಡೇಟಿಂಗ್ ನಡೆಸುತ್ತಿರುವುದು ಈ ಹುಡುಗನ ಜತೆಗೆ ಅಲ್ಲ. ಅದು ಬೇರೆ ಯುವಕನ ಜತೆಗಂತೆ..
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ