ವಿವಾದಕ್ಕೆ ಕಾರಣವಾಗಿದೆ ಅಮಿತಾಭ್ ಬಚ್ಚನ್ ಹಾಗೂ ಅವರ ಮಗಳು ಜೊತೆಯಾಗಿ ನಟಿಸಿದ ಜಾಹೀರಾತು
ಗುರುವಾರ, 19 ಜುಲೈ 2018 (12:28 IST)
ಮುಂಬೈ : ಬಾಲಿವುಡ್ ನಟ ಬಿಗ್ ಬಿ ಅಮಿತಾಬ್ ಬಚ್ಚನ್ ಹಾಗೂ ಅವರ ಮಗಳು ಜೊತೆಯಾಗಿ ನಟಿಸಿದ ಜಾಹೀರಾತು ಇದೀಗ ವಿವಾದವೊಂದಕ್ಕೆ ಕಾರಣವಾಗಿದೆ.
ಹೌದು ನಟ ಅಮಿತಾಬ್ ಬಚ್ಚನ್ ಹಾಗೂ ಅವರ ಮಗಳು ಶ್ವೇತಾ ಬಚ್ಚನ್ ನಂದ ಅವರು ಜ್ಯುವೆಲ್ಲರಿ ಜಾಹೀರಾತಿನಲ್ಲಿ ಜೊತೆಯಾಗಿ ನಟಿಸಿದ್ದರು. ಈ ಜಾಹೀರಾತು ಬ್ಯಾಂಕ್ಗಳಿಗಿಂತ ಚಿನ್ನದಲ್ಲಿ ಹೂಡಿಕೆ ಮಾಡಿ ಎಂದು ಸಂದೇಶ ನೀಡುವುದಾಗಿತ್ತು. ಆದರೆ ಈ ಜಾಹೀರಾತು ಬಗ್ಗೆ ಹಾಗೂ ಅಮಿತಾಬ್ ಬಚ್ಚನ್ ಹಾಗೂ ಅವರ ಪುತ್ರಿಯ ವಿರುದ್ಧ ಬ್ಯಾಂಕಿಂಗ್ ವಲಯ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಜಾಹೀರಾತಿನಲ್ಲಿ ಬಚ್ಚನ್ ಹಾಗೂ ಅವರ ಪುತ್ರಿಗೆ ಬ್ಯಾಂಕೊಂದರ ಸಿಬ್ಬಂದಿ ಅಸಹಕಾರ ತೋರುವಂತೆ ಚಿತ್ರಿಸಲಾಗಿದೆ. ಬ್ಯಾಂಕಿಂಗ್ ವಲಯದ ಆಕ್ರೋಶದ ಬೆನ್ನಲ್ಲೇ ಯೂಟ್ಯೂಬ್ನಲ್ಲಿನ ಈ ಜ್ಯುವೆಲ್ಲರಿ ಜಾಹೀರಾತುಗಳನ್ನು ತೆಗೆದು ಹಾಕಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ