ತಂದೆ ತಾಯಿಯ ಮೇಲೆ ದೌರ್ಜನ್ಯ ಎಸಗುವವರಿಗೆ ಹೈಕೋರ್ಟ್ ನೀಡಿದೆ ಬಿಗ್ ಶಾಕ್
ಮಂಗಳವಾರ, 17 ಜುಲೈ 2018 (12:07 IST)
ಮುಂಬೈ : ಹಿರಿಯ ನಾಗರಿಕರ ಪಾಲನೆ ಪೋಷಣೆಯ ವಿಚಾರಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪುವೊಂದನ್ನು ನೀಡಿದೆ.
ಈ ಕುರಿತು ವಿಶೇಷ ಕಾನೂನನ್ನು ಉಲ್ಲೇಖಿಸಿರುವ ಕೋರ್ಟ್ ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳದಿದ್ದರೆ, ದೌರ್ಜನ್ಯ ಎಸಗಿದರೆ ಮಗನಿಗೆ ನೀಡಿದ ಆಸ್ತಿಯನ್ನು ತಂದೆ ತಾಯಿ ವಾಪಸ್ ಪಡೆದುಕೊಳ್ಳಬಹುದು ಎಂದು ತಿಳಿಸಿದೆ.
ಈ ಹಿಂದೆ ಅಂಧೇರಿಯ ವ್ಯಕ್ತಿಯೊಬ್ಬರ ಪತ್ನಿ ಮೃತಪಟ್ಟಿದ್ದ ಸಂದರ್ಭದಲ್ಲಿ ಮಗ ಮತ್ತು ಸೊಸೆ ಫ್ಲ್ಯಾಟ್ ನ ಅರ್ಧ ಭಾಗವನ್ನು ಪಡೆದುಕೊಂಡಿದ್ದರು. ನಂತರ ಈ ವ್ಯಕ್ತಿ ಮರುಮದುವೆಯಾಗಿದ್ದರು. ಮಗ ಮತ್ತು ಸೊಸೆ ಎರಡನೇ ಪತ್ನಿಯನ್ನು ನಿರ್ಲಕ್ಷಿಸಲು ಆರಂಭಿಸಿದರು. ಇದರಿಂದ ಸಿಟ್ಟಿಗೆದ್ದ ಅವರು ತಾನು ಮಗನಿಗೆ ಕೊಟ್ಟ ಪಾಲನ್ನು ವಾಪಸ್ ಪಡೆಯಲು ಕೋರ್ಟ್ ಮೆಟ್ಟಿಲು ಹತ್ತಿದ್ದರು. ಆಗ ನ್ಯಾಯಾಲಯ ಆ ವ್ಯಕ್ತಿಯ ಪರವಾಗಿ ತೀರ್ಪು ನೀಡಿದೆ. ಈ ಮೂಲಕ ಕೋರ್ಟ್ ಹಿರಿಯ ನಾಗರಿಕರ ಪಾಲನೆ ಪೋಷಣೆಗೆ ಹೆಚ್ಚಿನ ಮಹತ್ವ ನೀಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ