ದಾಂಗಲ್ ಸಿನಿಮಾದ ರಿಲೀಸ್ ಬಳಿಕ ತುಗ್ ಸಿನಿಮಾದ ಶೂಟಿಂಗ್ ನಲ್ಲಿ ಭಾಗಿ- ಆಮೀರ್

ಮಂಗಳವಾರ, 9 ಆಗಸ್ಟ್ 2016 (09:02 IST)
ಸಲ್ಮಾನ್ ಖಾನ್ ಅವರು ಸುಲ್ತನ್ ಸಿನಿಮಾದಲ್ಲಿ ಕುಸ್ತಿಪಟುವಾಗಿ ಅಭಿನಯಿಸುತ್ತಿದ್ದರೆ ಇತ್ತ ಆಮೀರ್ ಖಾನ್ ಅವರು ದಾಂಗಲ್ ಸಿನಿಮಾದಲ್ಲಿ ಕುಸ್ತಿಪಟುವಾಗಿ ಅಭಿನಯಿಸುತ್ತಿದ್ದರು. ಇಬ್ಬರೂ ಕೂಡ ಒಂದೇ ತರವಾದ ಪಾತ್ರವನ್ನು ನಿರ್ವಹಿಸುತ್ತಿದ್ದರು. ಇನ್ನು ಇಬ್ಬರೂ ಸಿನಿಮಾ ಕೂಡ ಒಂದೇ ಸಮಯಕ್ಕೆ ರಿಲೀಸ್ ಆಗಬಹುದು ಅಂತಾ ಅಭಿಮಾನಿಗಳು ಲೆಕ್ಕಾಚಾರ ಹಾಕಿದ್ರು.ಆದ್ರೆ ಸುಲ್ತಾನ್ ಸಿನಿಮಾ ರಿಲೀಸ್ ಆಗಿ ತಿಂಗಳು ಕಳೆದ್ರು ಇದುವರೆಗೂ ದಾಂಗಲ್ ಸಿನಿಮಾ ರಿಲೀಸ್ ಆಗಿಲ್ಲ.


ಆಮೀರ್ ಖಾನ್ ಅಭಿನಯದ ದಾಂಗಲ್ ಸಿನಿಮಾ ರಿಲೀಸ್ ಆಗದೇ ಹಾಗೇ ಇದೆ ಹೀಗಿರುವಾಗಲೇ ತುಗ್ ಸಿನಿಮಾದಲ್ಲಿ ಆಮೀರ್ ಖಾನ್ ಅವರು ತಾನು ಅಭಿನಯಿಸುತ್ತಿದ್ದೇನೆ ಅಂತಾ ಬಹಿರಂಗಗೊಳಿಸಿದ್ದರು. ಆದ್ರೆ ಅಭಿಮಾನಿಗಳು ಮಾತ್ರ ಆಮೀರ್ ಅವರ ದಾಂಗಲ್ ಸಿನಿಮಾವೇ ರಿಲೀಸ್ ಆಗಿಲ್ಲ. ಹೀಗಿರುವಾಗಲ ಆಮೀರ್ ತುಗ್ ಸಿನಿಮಾವನ್ನು ಒಪ್ಪಿಕೊಂಡಿದ್ದಾರಲ್ಲಾ ಅನ್ನುತ್ತಿದ್ದರು.

ಆದ್ರೀಗ ಆಮೀರ್ ಖಾನ್ ಅವರೇ ತುಗ್ ಸಿನಿಮಾದ ಬಗ್ಗೆ ಬಾಯ್ಬಿಟ್ಟಿದ್ದಾರೆ.ಅಂದ್ಹಾಗೆ ಆಮೀರ್ ಖಾನ್ ಅವರು ತಮ್ಮ ದಾಂಗಲ್ ಸಿನಿಮಾ ರಿಲೀಸ್ ಆದ ಬಳಿಕವಷ್ಟೇ ತುಗ್ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗುತ್ತಾರಂತೆ.

ಅಂದ್ಹಾಗೆ ತುಗ್ ಸಿನಿಮಾವನ್ನು ವಿಜಯ್ ಕೃಷ್ಣ ಆಚಾರ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಇದು ಆಮೀರ್ ಖಾನ್ ಅವರ ವೃತ್ತಿ ಜೀವನದ ವಿಭಿನ್ನವಾದ ಸಿನಿಮಾವಂತೆ.ಸಿನಿಮಾದಲ್ಲಿ ಹದಿಹರೆಯ ಮೂವರು ಹೆಣ್ಣುಮಕ್ಕಳ ತಂದೆಯಾಗಿ ಆಮೀರ್ ಖಾನ್ ಅವರು ಅಭಿನಯಿಸಲಿದ್ದಾರೆ. ಇದುವೆರೆಗೂ ನಾಯಕಿಯ ಜೊತೆ ಸಿನಿಮಾಗಳಲ್ಲಿ ರೋಮ್ಯಾನ್ಸ್ ಮಾಡುತ್ತಿದ್ದ ಆಮೀರ್ ಇದೇ ಮೊದಲ ಬಾರಿಗೆ ಇಂತಹದ್ದೊಂದು ವಿಭಿನ್ನವಾದ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 

ವೆಬ್ದುನಿಯಾವನ್ನು ಓದಿ