ಬೆಂಗಳೂರು: 'ಸೀತಾ ವಲ್ಲಭ' ಸೀರಿಯಲ್‌ನಲ್ಲಿ ಮೈಥಿಲಿ ಪಾತ್ರದ ಮೂಲಕ ಜನಮನ್ನಣೆ ಗಳಿಸಿದ್ದ ನಟಿ ಸುಪ್ರೀತಾ ಸತ್ಯನಾರಾಯಣ್ ಅವರು ಮೇ 9ರಂದು ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದಾರೆ.
ಡಿಜಿಟಲ್ ಕ್ರಿಯೇಟರ್ ಮತ್ತು ಸಾಫ್ಟ್‌ವೇರ್ ಉದ್ಯೋಗಿಯಾಗಿರುವ ಚಂದನ್ ಶೆಟ್ಟಿ ಜತೆ ಸುಪ್ರೀತಾ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈ ಜೋಡಿ ಮಾರ್ಚ್ 12ರಂದು ಅದ್ಧೂರಿಯಾಗಿ ಉಂಗುರ ಬದಲಾಯಿಸಿದ್ದರು. ಇದೀಗ ಜೋಡಿ, ಕುಟುಂಬದವರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ನಿನ್ನೆ ನಡೆದ ರಿಸೆಪ್ಷನ್‌ನಲ್ಲಿ ಕಿರುತೆರೆ ನಟ ನಟಿಯರು ಭಾಗವಹಿಸಿ, ಶುಭಕೊರಿದ್ದರು.
ಸುಪ್ರೀತಾ ಸತ್ಯನಾರಾಯಣ್ ಮತ್ತು ಚಂದನ್ ಶೆಟ್ಟಿ ಅವರ ಮದುವೆಗೆ ಕಲಾವಿದರಾದ ಸುಂದರ್ ವೀಣಾ ದಂಪತಿ, ನೇಹಾ ಗೌಡ, ಚಂದನ್ ಗೌಡ, ರಶ್ಮಿ ಪ್ರಭಾಕರ್, ಇಶಿತಾ ವರ್ಷ ಮುಂತಾದವರು ಆಗಮಿಸಿ, ನೂತನ ಜೋಡಿಗೆ ಶುಭ ಹಾರೈಸಿದ್ದಾರೆ.