ಕಾರು ಅಪಘಾತದಲ್ಲಿ ಪಾರಾದ ದಂಗಲ್ ನಟಿ ಝೈರಾ

ಶನಿವಾರ, 10 ಜೂನ್ 2017 (16:53 IST)
ಶ್ರೀನಗರ: ಶ್ರೀನಗರದಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ದಂಗಲ್ ಚಿತ್ರದ ನಟಿ ಝೈರಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 
 
ಝೈರಾ ತನ್ನ ಗೆಳತಿ ಜತೆ ಕಾರಿನಲ್ಲಿ ಡಾಲ್ ಸರೋವರದ ತೀರದ ಬೋಲೆವಾರ್ಡ್ ರಸ್ತೆಯಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದ್ದು ಝೈರಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. 
 
ಚಾಲಕನ ನಿಯಂತ್ರಣ ತಪ್ಪಿ ಕಾರು ಹಳ್ಳಕ್ಕೆ ಬಿದ್ದಿದ್ದು ಕೂಡಲೇ ನಟಿಯನ್ನು ರಕ್ಷಿಸಲಾಗಿದೆ. ದಂಗಲ್ ಚಿತ್ರದಲ್ಲಿ ಝೈರಾ ಗೀತಾ ಫೋಗಟ್ ಪಾತ್ರ ನಿರ್ವಹಿಸಿದ್ದರು.
 

ವೆಬ್ದುನಿಯಾವನ್ನು ಓದಿ