ಆಸಿಡ್ ದಾಳಿ ಸಂತ್ರಸ್ತೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ದೀಪಿಕಾ ಪಡುಕೋಣೆ?

ಬುಧವಾರ, 10 ಅಕ್ಟೋಬರ್ 2018 (13:40 IST)
2005 ರಲ್ಲಿ ಆಸಿಡ್ ದಾಳಿಗೆ ತುತ್ತಾದ ಲಕ್ಷ್ಮೀ ಅಗರ್‌ವಾಲ್‌ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ದೀಪಿಕಾ ಪಡುಕೋಣೆ ಜೊತೆಗೆ ಚಿತ್ರವನ್ನು ಸಹ ನಿರ್ಮಿಸಲಿದ್ದಾರೆ.
ಮೇಘನಾ ಗುಲ್ಜಾರ್ ನಿರ್ದೇಶನದ ರಾಝಿ ಚಿತ್ರದ ಭರ್ಜರಿ ಯಶಸ್ಸಿನ ನಂತರ, ಮೇಘನಾ ಗುಲ್ಜಾರ್ ಅವರು ಆಸಿಡ್ ದಾಳಿಗೆ ತುತ್ತಾಗಿ ಹೋರಾಟ ನಡೆಸಿದ ಲಕ್ಷ್ಮೀ ಅಗರ್‌ವಾಲ್‌ ಅವರ ಕಥೆಯನ್ನು ಆಧರಿಸಿ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
 
ದೆಹಲಿಯ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಲಕ್ಷ್ಮಿಯ ಮೇಲೆ ದುಷ್ಕರ್ಮಿಯೊಬ್ಬ ಆಸಿಡ್ ದಾಳಿ ಮಾಡಿದ್ದ. ದಾಳಿಯಾದ ನಂತರ 10 ವರ್ಷಗಳ ನಂತರ 2013 ರಲ್ಲಿ ಆಸಿಡ್ ಕಾನೂನಿಗೆ ಸಂಬಂಧಪಟ್ಟಂತೆ ತಿದ್ದುಪಡಿಯನ್ನು ನ್ಯಾಯಾಲಯ ನೀಡಿತು.
 
ಲಕ್ಷ್ಮೀ ಅವರ ಕಥೆ ಕೇಳಿ ಮನಸ್ಸಿಗೆ ಬಹಳ ನೋವಾಯಿತು. ಇದು ಕೇವಲ ಒಂದು ಹಿಂಸೆಯ ಹೊರಟಿಲ್ಲ, ಧೈರ್ಯ, ಆಶಾವಾದ, ಭರವಸೆ ಮತ್ತು ಗೆಲುವಿನ ಘಟನೆಯಾಗಿದೆ. ಇದು ನನ್ನ ಮೇಲೆ ಅಪಾರವಾದ ಪರಿಣಾಮ ಉಂಟು ಮಾಡಿದೆ. ನಾನೇ ಲಕ್ಷ್ಮಿಯ ಪಾತ್ರವನ್ನು ನಿರ್ವವಹಿಸಬೇಕೆಂದು ತೀರ್ಮಾನಿಸಿದ್ದೇನೆ; ಮಾತ್ರವಲ್ಲ ಚಿತ್ರವನ್ನು ನಾನೇ ನಿರ್ಮಿಸಬೇಕೆಂದು ನಿರ್ಧರಿಸಿದೆ' ಎಂದು ದೀಪಿಕಾ ಪಡುಕೋಣೆ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ