ಜೆಎನ್ ಯು ವಿವಾದದಿಂದ ಆದಾಯಕ್ಕೆ ತೊಂದರೆ ತಂದುಕೊಂಡ ದೀಪಿಕಾ ಪಡುಕೋಣೆ

ಮಂಗಳವಾರ, 14 ಜನವರಿ 2020 (09:21 IST)
ಮುಂಬೈ: ಜೆಎನ್ ಯುಗೆ ಭೇಟಿ ಕೊಟ್ಟು ಪ್ರತಿಭಟನಾ ನಿರತರಿಗೆ ಬೆಂಬಲ ನೀಡಿದ್ದಕ್ಕೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಭಾರೀ ನಷ್ಟ ಅನುಭವಿಸಲಿದ್ದಾರೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.


ಈಗಾಗಲೇ ಛಪಕ್ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಹಣ ಗಳಿಕೆ ಮಾಡಲಿಲ್ಲ ಎಂಬ ಸುದ್ದಿಯಿದೆ. ಅದರ ಬೆನ್ನಲ್ಲೇ ಕೇಂದ್ರ ಸರ್ಕಾರ ಕೂಡಾ ವಿವಾದದ ಬಳಿಕ ನಟಿಯನ್ನು ಸ್ಕಿಲ್ ಇಂಡಿಯಾ ಯೋಜನೆಯ ವಿಡಿಯೋದಲ್ಲಿ ಬಳಸಲು ಹಿಂದೇಟು ಹಾಕಿದೆ.

ಇದರ ನಡುವೆಯೇ ಕೆಲವು ಟಾಪ್ ಬ್ರಾಂಡ್ ಕಂಪನಿಗಳನ್ನು ದೀಪಿಕಾರಿಂದ ಅಂತರ ಕಾಯ್ದುಕೊಳ್ಳುವ ನಿರೀಕ್ಷೆಯಿದೆ ಎನ್ನಲಾಗಿದೆ. ವಿವಾದ ತಣ್ಣಗಾಗುವವರೆಗೂ ದೀಪಿಕಾರ ಜಾಹೀರಾತುಗಳನ್ನು ಅಷ್ಟಾಗಿ ಪ್ರಚಾರಕ್ಕೆ ಬಳಸಿಕೊಳ್ಳದೇ ಇರಲು ಕೆಲವು ಕಂಪನಿಗಳು ನಿರ್ಣಯಿಸಿವೆ. ಇದು ದೀಪಿಕಾರ ಆದಾಯ ಮೂಲಕ್ಕೆ ಪೆಟ್ಟು ನೀಡಲಿದೆ ಎನ್ನಲಾಗಿದೆ. ಅಂತೂ ದೀಪಿಕಾ ವೃತ್ತಿ ಜೀವನಕ್ಕೆ ವಿವಾದದ ಪರಿಣಾಮ ತಟ್ಟಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ