ಜೆಎನ್ ಯು ಎಫೆಕ್ಟ್: ಮಹತ್ವದ ಅವಕಾಶ ಕಳಕೊಂಡರಾ ದೀಪಿಕಾ ಪಡುಕೋಣೆ?!

ಶುಕ್ರವಾರ, 10 ಜನವರಿ 2020 (09:11 IST)
ಮುಂಬೈ: ಜೆಎನ್ ಯು ಪ್ರತಿಭಟನಾ ನಿರತರನ್ನು ಭೇಟಿಯಾಗಿ ಕೆಲವರ ಕೆಂಗಣ್ಣಿಗೆ ಗುರಿಯಾಗಿರುವ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಈಗ ಮಹತ್ವದ ಅವಕಾಶವೊಂದನ್ನು ಕಳೆದುಕೊಂಡರಾ?


ದೀಪಿಕಾ ಜೆಎನ್ ಯುಗೆ ಭೇಟಿ ನೀಡಿದ ಬಳಿಕ ಅವರು ಬಲಪಂಥೀಯ ನಾಯಕರು ಮತ್ತು ಕೆಲವು ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದಕ್ಕೂ ಮೊದಲು ಕೇಂದ್ರ ಸರ್ಕಾರ ಸ್ಕಿಲ್ ಇಂಡಿಯಾ ಯೋಜನೆಯ ಪ್ರಚಾರ ವಿಡಿಯೋದಲ್ಲಿ ದೀಪಿಕಾರನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿತ್ತು.

ಆದರೆ ವಿವಾದದ ಬಳಿಕ ಸ್ಕಿಲ್ ಇಂಡಿಯಾ ಯೋಜನೆಯ ವಿಭಾಗ ಇದನ್ನು ಕೈಬಿಟ್ಟಿದೆ ಎನ್ನಲಾಗಿದೆ. ‘ಛಪಕ್’ ಸಿನಿಮಾದಲ್ಲಿ ದೀಪಿಕಾ ಆಸಿಡ್ ದಾಳಿಗೊಳಗಾದ ಯುವತಿಯ ಪಾತ್ರ ಮಾಡಿದ್ದರು. ಇದರಲ್ಲಿ ಆ ಯುವತಿ ತನ್ನ ಮೇಲಾದ ದೈಹಿಕ ದಾಳಿಯ ಹೊರತಾಗಿಯೂ ಜೀವನದಲ್ಲಿ ಮುನ್ನಗ್ಗುವ ಸ್ಪೂರ್ತಿದಾಯಕ ಕತೆಯಿದೆ. ಇದೇ ಕಾರಣಕ್ಕೆ ದೀಪಿಕಾರನ್ನು ಈ ವಿಡಿಯೋದಲ್ಲಿ ಬಳಸಿಕೊಳ್ಳಲು ನಿರ್ಧರಿಸಲಾಗಿತ್ತು. ಆದರೆ ವಿವಾದದ ಬಳಿಕ ಕೇಂದ್ರ ದೀಪಿಕಾರನ್ನು ಕೈ ಬಿಡಲು ಚಿಂತನೆ ನಡೆಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ