ದೀಪಿಕಾ ಪಡುಕೋಣೆ ಬೆಂಬಲಕ್ಕೆ ನಿಂತ ಕೇಂದ್ರ ಸಚಿವ ಪ್ರಕಾಶ್ ಜಾವೇಡ್ಕರ್

ಗುರುವಾರ, 9 ಜನವರಿ 2020 (09:41 IST)
ನವದೆಹಲಿ: ಜೆಎನ್ ಯುಗೆ ಭೇಟಿ ನೀಡಿದ್ದಕ್ಕೆ ಕೆಲವು ಬಿಜೆಪಿ ನಾಯಕರು, ಬಲಪಂಥೀಯರ ಕೆಂಗಣ್ಣಿಗೆ ಗುರಿಯಾಗಿರುವ ಬಾಲಿವುಡ್ ನಟಿ ದೀಪಿಕಾ ಪಡುಕೋಣೆಗೆ ಕೇಂದ್ರ ಸಚಿವ ಪ್ರಕಾಶ್ ಜಾವೇಡ್ಕರ್ ಬೆಂಬಲ ನೀಡಿದ್ದಾರೆ.


ದೀಪಿಕಾ ಜೆಎನ್ ಯುಗೆ ಭೇಟಿ ನೀಡಿ ಪ್ರತಿಭಟನಾಕಾರರಿಗೆ ಬೆಂಬಲ ಸೂಚಿಸಿದ್ದಕ್ಕೆ ಆಕೆಯ ಬಿಡುಗಡೆಯ ಹಂತದಲ್ಲಿರುವ ಛಪಕ್ ಸಿನಿಮಾ ಬಹಿಷ್ಕರಿಸಬೇಕೆಂದು ಕೆಲವರು ಕರೆ ನೀಡಿದ್ದಾರೆ.

ಈ ನಡುವೆ ಕೇಂದ್ರ ಸಚಿವ ಪ್ರಕಾಶ್ ಜಾವೇಡ್ಕರ್ ನಟಿ ಪರವಾಗಿ ಮಾತನಾಡಿದ್ದು, ‘ಕಲಾವಿದರು ಮಾತ್ರವಲ್ಲ, ಭಾರತದಲ್ಲಿ ಯಾವುದೇ ಸಾಮಾನ್ಯ ವ್ಯಕ್ತಿಗೂ ತಾನು ಬಯಸಿದ ಕಡೆ ಹೋಗುವ ಸ್ವಾತಂತ್ರ್ಯವಿದೆ. ಅದನ್ನು ಯಾರೂ ಆಕ್ಷೇಪಿಸುವಂತಿಲ್ಲ’ ಎಂದು ಪ್ರಕಾಶ್ ಜಾವೇಡ್ಕರ್ ಹೇಳಿದ್ದಾರೆ. ಈ ನಡುವೆ ಕೆಲವರು ಸಾಮಾಜಿಕ ಜಾಲತಾಣದ ಮೂಲಕವೂ ದೀಪಿಕಾ ಸಿನಿಮಾ ಬಹಿಷ್ಕರಿಸಲು ಕರೆ ನೀಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ