ದೀಪಿಕಾ ಪಡುಕೋಣೆ ಹಾಗೂ ರಣವೀರ್‌ ಸಿಂಗ್‌ ಮದುವೆ ಡೇಟ್ ಫಿಕ್ಸ್

ಶನಿವಾರ, 26 ಮೇ 2018 (06:48 IST)
ಮುಂಬೈ : ಬಾಲಿವುಡ್ ನ ಕ್ಯೂಟ್ ಕಪಲ್ ದೀಪಿಕಾ ಪಡುಕೋಣೆ ಹಾಗೂ ರಣವೀರ್‌ ಸಿಂಗ್‌  ಅವರ  ಬಗ್ಗೆ ಆಗಾಗ ಗಾಳಿಸುದ್ದಿ ಹರಿದಾಡುತ್ತಿದ್ದು, ಇದೀಗ ಅವರ ಮದುವೆ  ಡೇಟ್ ಫಿಕ್ಸ್ ಆಗಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.


ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದ ದೀಪಿಕಾ ಪಡುಕೋಣೆ ಹಾಗೂ ರಣವೀರ್‌ ಸಿಂಗ್‌  ಅವರ ಮದುವೆ ನ.19ರಂದು ಮುಂಬೈನಲ್ಲೇ ನಡೆಯಲಿದೆ ಎನ್ನಲಾಗುತ್ತಿದೆ. ಆದರೆ ಮದುವೆಯ ಡೇಟ್ ಫಿಕ್ಸ್ ಆಗಿರುವ ಬಗ್ಗೆ ದೀಪಿಕಾ ಆಗಲಿ ರಣವೀರ್ ಸಿಂಗ್ ಆಗಲಿ ಈವರೆಗೆ ಅಧಿಕೃತವಾಗಿ ಖಚಿತಪಡಿಸಿಲ್ಲ. ಆದರೆ ಮೂಲಗಳ ಪ್ರಕಾರ ಈ ಬಾರಿ ಹೊರ ಬಂದ ಡೇಟ್ ಪಕ್ಕಾ ಎನ್ನಲಾಗುತ್ತಿದೆ. ಹಿಂದೂ ಸಂಪ್ರದಾಯದಂತೆ ಅವರ ಮದುವೆ ನಡೆಯಲಿದ್ದು ಆಪ್ತರಿಗಷ್ಟೇ ಸೀಮಿತವಾಗಿರುತ್ತದೆ ಎನ್ನಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ