ಕೃತಿ ಸನೋನ್,ಸುಶಾಂತ್ ಜತೆಗೆ 'ರಾಬ್ತಾ' ಚಿತ್ರದಲ್ಲಿ ದೀಪಿಕಾ
ಶುಕ್ರವಾರ, 20 ಮೇ 2016 (18:19 IST)
ನಟಿ ಕೃತಿ ಸನೋನ್ ಹಾಗೂ ಸುಶಾಂತ್ ಸಿಂಗ್ ರಜಪೂತ್ 'ರಾಬ್ತಾ' ಸಿನಿಮಾದಲ್ಲಿ ಜೊತೆಯಾಗಿ ಕಾಣಿಸಿಕೊಳ್ಳಲಿದ್ದಾರೆ.. ದೀಪಿಕಾ ಸ್ಪೆಷಲ್ ಆಗಿ ಈ ಚಿತ್ರದಲ್ಲಿ ಎಂಟ್ರಿ ನೀಡಲಿದ್ದಾರೆ.
ರಾಬ್ತಾ ಚಿತ್ರದ ಸಾಂಗ್‌ಗಾಗಿ ದೀಪಿಕಾ ಸಹಿ ಹಾಕಿದ್ದಾರಂತೆ... ಈ ಚಿತ್ರದ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ ಪ್ರೀತಮ್.. ಇದೇ ಮೊದಲ ಬಾರಿಗೆ ಸುಶಾಂತ್ ಹಾಗೂ ಕೃತಿ ಜೊತೆಯಾಗಿ ಆಕ್ಟ್ ಮಾಡುತ್ತಿದ್ದಾರೆ.
ರಾಬ್ತಾ ಸಿನಿಮಾವನ್ನು ದಿನೇಶ್ ವಿಜಯನ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾಕ್ಕಾಗಿ ಸುಶಾಂತ್ ಹಾಗೂ ಕೃತಿ ಅವರು ಸಾಕಷ್ಟು ತಯಾರಿಗಳನ್ನು ಮಾಡಿಕೊಂಡಿದ್ದಾರಂತೆ.ಇನ್ನು ಸೆಟ್ ನಲ್ಲಿ ಸುಶಾಂತ್ ಹಾಗೂ ಕೃತಿ ನಡುವೆ ಉತ್ತಮ ಬಾಂಧವ್ಯವಿದೆ ಅಂತಾ ಸಿನಿಮಾ ತಂಡ ಹೇಳಿದೆ.
ದೀಪಿಕಾ ಈ ಚಿತ್ರದ ಒಂದು ಹಾಡಿನಲ್ಲಿ ದೀಪಿಕಾ ನಟಿಸಲಿದ್ದಾರಂತೆ. ಹಾಗಾದ್ರೆ ದೀಪಿಕಾ ರಾಬ್ತಾ ಚಿತ್ರವನ್ನು ಅಭಿನಯಿಸುತ್ತಿರುವುದನ್ನು ನೋಡಿ, ಅವರ ಅಭಿಮಾನಿಗಳಿಗೆ ಖುಷಿ ಆಗದೇ ಇರದು.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ