ಆಂಕರ್ ಅನುಶ್ರಿ ಮದುವೆ ಫೋಟೋಗಳು ಇಲ್ಲಿವೆ

Krishnaveni K

ಗುರುವಾರ, 28 ಆಗಸ್ಟ್ 2025 (12:27 IST)
Photo Credit: Facebook
ಕನ್ನಡದ ಸ್ಟಾರ್ ನಿರೂಪಕಿ ಅನುಶ್ರೀ ಇಂದು ರೋಷನ್ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಖಾಸಗಿ ರೆಸಾರ್ಟ್ ನಲ್ಲಿ ಮದುವೆ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿದೆ.

ಕೆಂಬಣ್ಣದ ರೇಷ್ಮೆ ಸೀರೆಯಲ್ಲಿ ಅನುಶ್ರೀ ಮಿಂಚಿದ್ದರೆ ರೋಷನ್ ಕೂಡಾ ಮದುಮಗನಾಗಿ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಮದುವೆ ಫೋಟೋಗಳು ಇಲ್ಲಿವೆ.

ಅನುಶ್ರೀ ಮದುವೆಗೆ ಸ್ಯಾಂಡಲ್ ವುಡ್, ಕಿರುತೆರೆ ಸ್ನೇಹಿತರು ಸಾಕ್ಷಿಯಾಗಿದ್ದಾರೆ. ಕಗ್ಗಲೀಪುರ ಬಳಿ ರೆಸಾರ್ಟ್ ಒಂದರಲ್ಲಿ ಅನುಶ್ರೀ ಮದುವೆ ಕಾರ್ಯಕ್ರಮ ನೆರವೇರಿದೆ.

ಇಂದು 10.56 ರ ಸುಮೂಹರ್ತದಲ್ಲಿ ರೋಷನ್-ಅನುಶ್ರೀ ಸತಿಪತಿಗಳಾಗಿದ್ದಾರೆ.

ಸಂಗೀತ ನಿರ್ದೇಶಕ ಹಂಸಲೇಖ, ನಟ ವಿಜಯ್ ರಾಘವೇಂದ್ರ, ನಟ ಲವ್ಲಿ ಸ್ಟಾರ್ ಪ್ರೇಮ್, ಕಿಶೋರ್ ಕುಮಾರ್, ಶರಣ್, ಚೈತ್ರಾ ಜೆ ಆಚಾರ್, ಕಾವ್ಯಾ ಶಾ, ಗಾಯಕಿ ಪೃಥ್ವಿ ಭಟ್ ದಂಪತಿ ಸೇರಿದಂತೆ ಸಿನಿ ಸ್ನೇಹಿತರು ಬಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ