ಪಾರ್ಟಿಯಲ್ಲಿ ಬಾಲಿವುಡ್ ನ ಮಾಜಿ ಜೋಡಿಹಕ್ಕಿಗಳಾಗಿದ್ದ ರಣ್ಬೀರ್ ಹಾಗೂ ದೀಪಿಕಾ ಪಡುಕೋಣೆ ಕಪ್ಪು ಬಣ್ಣದ ಉಡುಗೆಯಲ್ಲಿಯೇ ಕಾಣಿಸಿಕೊಂಡಿದ್ದರು. ಜೊತೆಯಾಗಿ ಸಿನಿಮಾ ನಿರ್ದೇಶಕ ಇಮ್ತಿಯಾಜ್ ಖಾನ್ ನಿರ್ಮಾಪಕ ಸಾಜಿದ್ ನಾಡಿಯಾಲಾ ಕೂಡ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಮುಂದಿನ ವರ್ಷ ತೆರೆ ಕಾಣಲಿರುವ ಈ ಸಿನಿಮಾದ ಮುಂದಿನ ಭಾಗದ ಚಿತ್ರೀಕರಣ ಫ್ರಾನ್ಸ್ ನ ದ್ವೀಪಗಳಲ್ಲಿ ನಡೆಲಿವೆಯಂತೆ.
ಬಾಲಿವುಡ್ ನ ಮಾಜಿ ಜೋಡಿಹಕ್ಕಿಗಳಾದ ರಣ್ಬೀರ್ ಹಾಗೂ ದೀಪಿಕಾ ಪಡುಕೋಣೆ ಜೊತೆಯಾಗಿ ಕಾಣಿಸಿಕೊಳ್ಳುತ್ತಿರುವ ವಿಚಾರ ಎಲ್ಲರಿಗೂ ಗೊತ್ತೆ ಇದೆ. ಇದೀಗ ಮುಂಬೈನಲ್ಲಿ ನಡೆದ ಸಿನಿಮಾ ವಾರ್ಮ್ ಅಫ್ ಪಾರ್ಟಿಯಲ್ಲಿ ಕೂಡ ರಣ್ಬೀರ್ ಹಾಗೂ ದಿಪ್ಪಿ ಕಾಣಿಸಿಕೊಂಡಿದ್ದಾರೆ. ಒಂದೇ ಪಾರ್ಟಿಯಲ್ಲಿ ಇಬ್ಬರು ಕಾಣಿಸಿಕೊಂಡದ್ದು ಬಾಲಿವುಡ್ ಅಂಗಳದಲ್ಲಿ ಸದ್ಯಕ್ಕೆ ಒಂದಷ್ಟು ಗುಸುಗುಸಿಗೆ ಕಾರಣವಾಗಿದೆ.
2013ರಲ್ಲಿ ಹೇ ಜಮಾನಿ ಹೇ ದಿವಾನಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇದಗ ಎರಡನೇ ಸಿನಿಮಾದಲ್ಲಿ ಮತ್ತೆ ಒಂದಾಗಿದ್ದಾರೆ. ಅತ್ತ ದೀಪಿಕಾಗೂ ಇಮ್ತಿಯಾಜ್ ಖಾನ್ ಜೊತೆ ಎರಡನೇ ಸಿನಿಮಾಗಿದ್ರೆ, ರಣ್ಬೀರ್ ಕಪೂರ್ ಗೂ ಇಮ್ತಿಯಾಜ್ ಖಾನ್ ಜೊತೆ ಎರಡನೇ ಸಿನಿಮಾವಾಗಿದೆ. ಇಬ್ಬರೂ ಈ ಹಿಂದೆ ಇಮ್ತಿಯಾಜ್ ಜೊತೆ ಕೆಲಸ ಮಾಡಿದ್ದರು.