ರಣಬೀರ್ ಕಪೂರ್ ಫೋಟೋ ಪೋಸ್ಟ್ ಮಾಡಿ ಟ್ರೋಲ್‌ಗೆ ಗುರಿಯಾದ ದೀಪಿಕಾ..

ಮಂಗಳವಾರ, 21 ಆಗಸ್ಟ್ 2018 (17:19 IST)
ದೀಪಿಕಾ ಪಡುಕೋಣೆ ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದನ್ನು ಪೋಸ್ಟ್ ಮಾಡಿ ಟ್ರೋಲ್‌ಗೆ ಒಳಗಾಗಿದ್ದಾರೆ. ವಿಶ್ವ ಛಾಯಾಗ್ರಹಣದ ದಿನದ ಕುರಿತು ದೀಪಿಕಾ ಪಡುಕೋಣೆ ತಮ್ಮದೇ ಚಿತ್ರವೊಂದನ್ನು ಅಪ್‌ಲೋಡ್ ಮಾಡಿದ್ದಾರೆ. 
ಇದು ತಮಾಶಾ ಚಿತ್ರದ ಶೂಟಿಗ್ ವೇಳೆ ತೆಗೆದ ಚಿತ್ರವಾಗಿದ್ದು ಇದರಲ್ಲಿ ದೀಪಿಕಾ ಕಲ್ಲಿನ ಪರ್ವತದ ಮೇಲೆ ಕುಳಿತಿರುವ ರಣಬೀರ್ ಅವರ ಫೋಟೋ ತೆಗೆಯುತ್ತಿರುವುದನ್ನು ನೋಡಬಹುದು. 'ಸೆರೆಹಿಡಿಯುತ್ತಿರುವ ಕ್ಷಣಗಳು #ವಿಶ್ವ ಛಾಯಾಗ್ರಹಣ ದಿನ' ಎನ್ನುವ ಶೀರ್ಷಿಕೆಯನ್ನು ನೀಡಿ ಚಿತ್ರವನ್ನು ಹಂಚಿಕೊಂಡಿದ್ದಾರೆ.
 
ಈ ಚಿತ್ರ ದೀಪಿಕಾ ಅವರ ಕೆಲವು ಅಭಿಮಾನಿಗಳಿಗೆ ಇಷ್ಟವಾದಂತಿಲ್ಲ. ಆದ್ದರಿಂದ ಅವರು ಈ ಚಿತ್ರವನ್ನು ಕುರಿತು ದೀಪಿಕಾ ಪಡುಕೋಣೆ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುತ್ತಿದ್ದಾರೆ. 
 
ಇತ್ತೀಚೆಗೆ ದೀಪಿಕಾರ ಪ್ರಸ್ತುತ ಬಾಯ್‌ಫ್ರೆಂಡ್ ರಣವೀರ್ ಸಿಂಗ್ ಅವರೊಂದಿಗಿನ ಮದುವೆಯ ಕುರಿತು ಬಿಸಿ ಬಿಸಿ ಚರ್ಚೆಯಾಗುತ್ತಿದ್ದು, ಅವರ ಅಭಿಮಾನಿಗಳು ದೀಪಿಕಾ ರಣವೀರ್ ಸಿಂಗ್ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸಲಿ ಎಂದು ಬಯಸುತ್ತಿರುವಂತೆ ತೋರುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ