ಸಿನಿ ಜೀವನದಲ್ಲಿ ಲೈಂಗಿಕ ದೌರ್ಜನ್ಯದ ಕಹಿ ಅನುಭವವನ್ನು ಅನುಭವಿಸಿದ್ರಾ ಸ್ಟಾರ್ ನಟಿ ದೀಪಿಕಾ
ಶನಿವಾರ, 30 ಜೂನ್ 2018 (06:58 IST)
ಮುಂಬೈ : ಬಾಲಿವುಡ್ ಮಾತ್ರವಲ್ಲ ಹಾಲಿವುಡ್ ಸಿನಿಮಾ ರಂಗದಲ್ಲಿಯೂ ನಟಿಸಿ ಸೈ ಎನಿಸಿಕೊಂಡಿರುವ ಬಾಲಿವುಡ್ ನ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಅವರು ಕೂಡ ತಮ್ಮ ಸಿನಿ ಜೀವನದ ಆರಂಭದಲ್ಲಿ ಲೈಂಗಿಕ ದೌರ್ಜನ್ಯದ ಕಹಿ ಅನುಭವವನ್ನು ಅನುಭವಿಸಿದ್ದಾರಂತೆ.
ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದ ವೇಳೆ ಈ ವಿಚಾರವನ್ನು ನಟಿ ದೀಪಿಕಾ ಅವರು ಹೇಳಿಕೊಂಡಿದ್ದಾರೆ. ‘ಒಂದೊಮ್ಮೆ ನನಗೆ ಸ್ತನ ಸರ್ಜರಿ ಮಾಡಿಕೊಳ್ಳುವಂತೆ ಸಲಹೆ ನೀಡಲಾಗಿತ್ತು. ಅಲ್ಲದೆ ಇಂಡಸ್ಟ್ರೀಯಲ್ಲಿ ಹೆಸರುಮಾಡಲು ಅಗತ್ಯವಾದ ಇನ್ನಿತರ ಬ್ಯೂಟಿ ಪ್ಯಾಗ್ ನೆಂಟ್ ಗಳನ್ನು ಮಾಡುವಂತೆ ಸೂಚಿಸಲಾಗಿತ್ತು. ಅವರ ಪ್ರಕಾರ ಬಾಲಿವುಡ್ ನಲ್ಲಿ ಗುರುತಿಸಿಕೊಳ್ಳಲು, ಇಂತಹ ಟೆಕ್ನಿಕಲ್ ಗಳು ಅತ್ಯಗತ್ಯ ಎಂಬುವುದು ಅವರ ನಂಬಿಕೆ. ಆದರೆ ನನಗೆ ಅದರಲ್ಲಿ ನಂಬಿಕೆ ಇರಲಿಲ್ಲ. ನಾನು ನನ್ನದೇ ಆದ ಹಾದಿಯಲ್ಲಿ ನಡೆದೆ. ಇಂದಿಗೆ ಯಶಸ್ಸು ನನ್ನ ಹಿಂದೆ ಬಂದಿದೆ’ ಎಂದು ದೀಪಿಕಾ ಅವರು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ