ಮುಂಬೈ :ಬಾಲಿವುಡ್ ನಟ ಸಂಜಯ್ ದತ್ ಜೀವನಾಧಾರಿಸಿದ 'ಸಂಜು' ಸಿನಿಮಾ ಇದೇ ಜೂನ್ 29 ಕ್ಕೆ ರಿಲೀಸ್ ಆಗಲು ರೆಡಿಯಾಗಿತ್ತು, ಆದರೆ ಈಗ ಈ ಸಿನಿಮಾದ ವಿವಾದವೊಂದರಲ್ಲಿ ಸಿಲುಕಿಕೊಂಡಿದೆ.
ನಿರ್ದೇಶಕ ರಾಜ್ ಕುಮಾರ್ ಹಿರಾನಿ ಅವರು ನಿರ್ದೇಶಿಸಿದ್ದ ‘ಸಂಜು’ ಸಿನಿಮಾದ ಟ್ರೇಲರ್ ನಲ್ಲಿ ಒಂದು ದೃಶ್ಯದಲ್ಲಿ ನಿಮ್ಮ ಗರ್ಲ್ ಫ್ರೆಂಡ್ ಬಗ್ಗೆ ಹೇಳಿ ಎಂದು ಪತ್ರಕರ್ತೆ ಸಂಜು (ರಣ್ಬೀರ್ ಕಪೂರ್ ) ಅವರನ್ನು ಕೇಳಿದಾಗ, ವೇಶ್ಯೆಯನ್ನು ಲೆಕ್ಕಹಾಕ್ಲಾ ಅಥವಾ ಬಿಟ್ಟು ಬಿಡ್ಲಾ, ಅವ್ರನ್ನು ಬಿಡುತ್ತೇನೆ. 308 ತನಕ ನೆನಪಿದೆ, ಸೆಫ್ಟಿಗಾಗಿ 350 ಎಂದು ಬರೆದುಕೊಳ್ಳಿ ಎನ್ನುತ್ತಾರೆ. ಇದು ವೇಶ್ಯೆಯರ ಬಗ್ಗೆ ಅವಹೇಳನ ಮಾಡಿದ್ದು ಎಂದು ಸೆಕ್ಸ್ ವರ್ಕರ್ಸ್ ಚಿತ್ರದ ನಟ ರಣಬೀರ್ ಕಪೂರ್ ಅವರ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಹಿನ್ನಲೆಯಲ್ಲಿ ಇದೀಗ ಜೂನ್ 29 ಕ್ಕೆ ಈ ಚಿತ್ರ ತೆರೆ ಕಾಣುತ್ತೋ ಇಲ್ಲವೋ ಎಂಬ ಗೊಂದಲ ಸೃಷ್ಟಿಯಾಗಿದೆ, ಆದರೆ ಚಿತ್ರತಂಡ ಮಾತ್ರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ