ಜಿಮ್ನಾಸ್ಟಿಕ್ ಪ್ರಾಕ್ಟಿಸ್ ವೇಳೆ ಮೊಣಕಾಲಿಗೆ ಗಾಯ ಮಾಡಿಕೊಂಡ ದಿಶಾ ಪಟಾಣಿ
ಭಾನುವಾರ, 22 ಜುಲೈ 2018 (07:23 IST)
ಮುಂಬೈ : ಬಾಲಿವುಡ್ ನಟಿದಿಶಾ ಪಟಾಣಿ ಭಾರತ್ ಚಿತ್ರಕ್ಕಾಗಿ ಜಿಮ್ನಾಸ್ಟಿಕ್ ಪ್ರಾಕ್ಟಿಸ್ ವೇಳೆ ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದಾರಂತೆ.
ಹೌದು, ಬಾಲಿವುಡ್ ನಟ ಸಲ್ಮಾನ್ ಖಾನ್ ನಟಿಸುತ್ತಿರುವ ಭಾರತ್ ಚಿತ್ರದಲ್ಲಿ ದಿಶಾ ಪಠಾನಿ ನಟಿಸುತ್ತಿರುವ ವಿಷಯ ಎಲ್ಲರಿಗೂ ತಿಳಿದೆ ಇದೆ. ಈ ಚಿತ್ರದಲ್ಲಿ ಅವರು ಸರ್ಕಸ್ ಆರ್ಟಿಸ್ಟ್ ಆಗಿ ನಟಿಸಲಿದ್ದಾರೆ. ಈಗಾಗಲೇ ಈ ಪಾತ್ರಕ್ಕೆ ಭರ್ಜರಿ ತಯಾರಿ ನಡೆಯುತ್ತಿದ್ದು, ಅದಕ್ಕಾಗಿ ನಟಿ ದಿಶಾ ಕ್ಲಾಸ್ ಕೂಡ ತೆಗೆದುಕೊಳ್ಳುತ್ತಿದ್ದಾರೆ. ಆ ವೇಳೆ ಅವರು ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದಾರೆ. ಈಗಾಗಲೇ ವೈದ್ಯರಿಂದ ಚಿಕಿತ್ಸೆ ಪಡೆದಿದ್ದು, ಕೆಲ ದಿನಗಳವೆರೆಗೆ ವಿಶ್ರಾಂತಿ ಪಡೆಯಲಿದ್ದಾರೆ.
ಭಾರತ್ ಸಿನಿಮಾವನ್ನು ಅಲಿ ಅಬ್ಬಾಸ್ ಜಫರ್ ನಿರ್ದೇಶನ ಮಾಡಲಿದ್ದು, 2014ರ ಕೊರಿಯನ್ ಚಿತ್ರ ಓಡ್ ತು ಮೈ ಫಾದರ್ ಸಿನಿಮಾದ ಸ್ಫೂರ್ತಿ ಪಡೆದು ಚಿತ್ರದ ಕಥೆ ಹೆಣೆಯಲಾಗಿದೆ. ಭಾರತ್ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ, ಸಲ್ಮಾನ್ ಖಾನ್, ಟಬು, ಸುನಿಲ್ ಗ್ರೋವರ್ ಪ್ರಮುಖ ಪಾತ್ರ ನಿಭಾಯಿಸಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ