ಜ್ಯುವೆಲ್ಲರಿ ಕಂಪೆನಿಗೆ ಈ ನಟಿ ಮಾಡಿದ ವಂಚನೆಯಾದರೂ ಏನು ಗೊತ್ತೇ?
ಶನಿವಾರ, 21 ಜುಲೈ 2018 (07:08 IST)
ಮುಂಬೈ : ಬಿಗ್ ಬಾಸ್ ಮಾಜಿ ಸ್ಪರ್ಧಿ, ಕಿರುತೆರೆ ನಟಿ ಹೀನಾ ಖಾನ್ ಅವರು ಜ್ಯುವೆಲ್ಲರಿ ಕಂಪೆನಿಯೊಂದಕ್ಕೆ ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ದಾದಾ ಸಾಹೇಬ್ ಅವಾರ್ಡ್ ಇವೆಂಟ್ನಲ್ಲಿ ಪಾಲ್ಗೊಳ್ಳುವ ಸಲುವಾಗಿ ಸುಮಾರು 11 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ತೆಗೆದುಕೊಂಡು, ಕಾರ್ಯಕ್ರಮದಲ್ಲಿ ಈ ಆಭರಣಗಳನ್ನು ಪ್ರಮೊಷನ್ ಮಾಡಿ, ಮರಳಿಸುವುದಾಗಿ ಹೇಳಿದ್ದರಂತೆ. ಆದರೆ, ಈವರೆಗೂ ಅವರು ಆಭರಣಗಳನ್ನು ವಾಪಸ್ ನೀಡಿಲ್ಲವೆಂದು ಆಭರಣಗಳ ಮಳಿಗೆಯ ಮಾಲೀಕ ರಾಕೇಶ್ ಸಿಂಗ್ ಎನ್ನುವರು ಆರೋಪಿಸಿದ್ದಾರೆ.
ಅಲ್ಲದೇ ಅವರ ಬಳಿ ಆಭರಣ ಮರಳಿಸಿ, ಇಲ್ಲವೇ 11 ಲಕ್ಷ ರೂ.ಹಣ ಪಾವತಿಸಿ ಎಂದು ರಾಕೇಶ್ ಸಿಂಗ್ ಮನವಿಮಾಡಿಕೊಂಡರು ಕೂಡ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲವಂತೆ. ಆದಕಾರಣ ಆಭರಣಗಳ ಮಳಿಗೆಯ ಮಾಲೀಕ ರಾಕೇಶ್ ಸಿಂಗ್ ನಟಿಗೆ ಲೀಗಲ್ ನೋಟಿಸ್ ಕೂಡ ನೀಡಿದ್ದಾರಂತೆ.
ಆದರೆ. ತಮ್ಮ ವಿರುದ್ಧದ ಆರೋಪವನ್ನು ತಳ್ಳಿ ಹಾಕಿರುವ ಹೀನಾ ಖಾನ್, ವಿರೋಧಿಗಳೇ ನಿಮ್ಮ ಬೆದರಿಕೆಗಳಿಗೆ ಭಯಪಡುವುದಿಲ್ಲ, ಇಂತಹ ಪ್ರಯತ್ನಗಳು ಉಪಯೋಗವಾಗುವುಲ್ಲ, ಹೊಸದನ್ನು ಪ್ರಯತ್ನಿಸಿ ಎಂದಿದ್ದಾರಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ